ಆಯಿಷ್'ಗೆ 10 ಎಕರೆ ಜಾಗ ಕೊಡಿಸಿದ್ದ ಶ್ರೀನಿವಾಸ ಪ್ರಸಾದ್

srinivasa prasad
Published on

ಮೈಸೂರು: ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಗೆ ಸಂಸದ ವಿ.ಶ್ರೀನಿವಾಸ ಪ್ರಸಾದ್ ರಾಜ್ಯ ಸರ್ಕಾರದಿಂದ 10 ಎಕರೆ ಜಾಗ ಕೊಡಿಸಿದ್ದಾರೆ ಎಂದು ಆಯಿಷ್ ನಿರ್ದೇಶಕಿ ಡಾ.ಎಂ.ಪುಷ್ಪಾವತಿ ಹೇಳಿದರು.

ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ (ಆಯಿಷ್)ಯಲ್ಲಿ ವಿಶೇಷ ತರಬೇತಿ ಪಡೆದ ವಿಶೇಷ ಮಕ್ಕಳಿಗೆ ಮಂಗಳವಾರ ಆಯಿಷ್ ಸಭಾಂಗಣದಲ್ಲಿ ಆಯೋಜಿಸಿದ್ದ ಶಾಲಾ ಪೂರ್ವ ಪದವಿ ಪ್ರದಾನ ಸಮಾರಂಭದಲ್ಲಿ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿ, ಶ್ರೀನಿವಾಸ ಪ್ರಸಾದ್ ಅವರು ಕೊಡಿಸಿದ ಜಾಗದಲ್ಲಿ ಪ್ರೀಸ್ಕೂಲ್ (ಶಾಲಾಪೂರ್ವ) ನಿರ್ಮಿಸುವ ಉದ್ದೇಶವಿದೆ ಎಂದರು.

ಪ್ರೀಸ್ಕೂಲ್‌ನಲ್ಲಿ ಮಕ್ಕಳು ಹಾಗೂ ಪಾಲಕರಿಗೆ ಎಲ್ಲ ರೀತಿಯ ಸೌಲಭ್ಯಗಳು ದೊರೆಯಲಿದೆ. ಇದಕ್ಕೆ ಯೋಜನೆ ರೂಪಿಸಿ ಸರ್ಕಾರದ ಅನುಮೋದನೆ ಪಡೆಯುವ ಅವಶ್ಯಕತೆ ಇದೆ. ಪ್ರೀಸ್ಕೂಲ್ ನಿರ್ಮಾಣವಾದರೆ ನಾವು ಶ್ರೀನಿವಾಸ ಪ್ರಸಾದ್‌ಗೆ ನಿಜವಾಗಿಯೂ ಶ್ರದ್ಧಾಂಜಲಿ ಸಲ್ಲಿಸಿದ ಹಾಗೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net