ಯುವಪೀಳಿಗೆಗೆ ಶ್ರೀನಿವಾಸ ಪ್ರಭು ಬದುಕು ಮಾದರಿ

byn (1)
Published on

ಬೈಂದೂರು: ತಾಲೂಕಿನ ಸಾಂಸ್ಕೃತಿಕ ರಾಯಭಾರಿಯಾಗಿರುವ ಶ್ರೀನಿವಾಸ ಪ್ರಭು ಬೆಳೆದು ಬಂದ ಹಾದಿ ಅನನ್ಯವಾದುದು. ಅವರು ಯುವಪೀಳಿಗೆಗೆ ಅನುಕರಣೀಯವಾಗಿದ್ದು, ಅವರ ಬದುಕು ಮಾದರಿಯಾಗಿದೆ ಎಂದು ನಾಗೂರು ಸಂದೀಪನ್ ಆಂಗ್ಲ ವಾಧ್ಯಮ ಶಾಲೆ ಮುಖ್ಯಶಿಕ್ಷಕ ಬಿಜೂರು ವಿಶ್ವೇಶ್ವರ ಅಡಿಗ ಹೇಳಿದರು.

ಇತ್ತೀಚಿಗೆ ನಿಧನರಾದ ಬ್ಯಾಂಕ್‌ನ ನಿವೃತ್ತ ಅಧಿಕಾರಿ ಯು.ಶ್ರೀನಿವಾಸ ಪ್ರಭು ಅವರಿಗೆ ಉಪ್ಪುಂದ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದಲ್ಲಿ ಸೋಮವಾರ ನಡೆದ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸೃಷ್ಟಿಯ ನಿಯಮ ಮೀರಲು ಯಾರಿಗೂ ಸಾಧ್ಯವಾಗದು. ಅಜಾತಶತ್ರುವಾಗಿದ್ದ ಅವರು ಮಾಡುತ್ತಿದ್ದ ಪ್ರತಿಯೊಂದು ಕೆಲಸದಲ್ಲಿಯೂ ಸಹೋದರತ್ವ, ಪ್ರೀತಿ, ವಿಶ್ವಾಸ ಇರುತ್ತಿತ್ತು ಎಂದರು.

ಸಾಹಿತಿ ಓಂಗಣೇಶ್ ಕಾಮತ್ ವಾತನಾಡಿ, ವ್ಯಕ್ತಿ ದೂರವಾದರೂ ವ್ಯಕ್ತಿತ್ವಕ್ಕೆ ಸಾವಿಲ್ಲ. ಮನುಷ್ಯನ ಜೀವಿತಾವಧಿಯಲ್ಲಿ ವಾಡಿದ ಸತ್ಕಾರ್ಯಗಳು ವಾತ್ರ ನಂತರದ ದಿನಗಳಲ್ಲಿ ಗಣನೆಗೆ ಬರುತ್ತವೆ. ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಶ್ರೀನಿವಾಸ ಪ್ರಭುಗಳು ಈ ಭಾಗದಲ್ಲಿ ಓರ್ವ ಸಾಂಸ್ಕೃತಿಕ ಸಂತನಾಗಿ ಚಿರಸ್ಥಾಯಿಯಾಗಿದ್ದಾರೆ ಎಂದರು.

ಸಾಮೂಹಿಕವಾಗಿ ಪ್ರಭು ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಅನೇಕ ಹಿರಿಯರು ನುಡಿನಮನ ಸಲ್ಲಿಸಿದರು. ಲಾವಣ್ಯ ಕಲಾವಿದರಿಂದ ರಂಗನಮನ ಹಾಗೂ ಯಕ್ಷಮಿತ್ರರಿಂದ ಯಕ್ಷನಮನ ಸಲ್ಲಿಸಲಾಯಿತು.

ಶ್ರೀನಿವಾಸ ಪ್ರಭು ಅವರು ನಿವೃತ್ತಿಯಾದ ಬಳಿಕ ಹಲವು ವರ್ಷ ನಾಗೂರು ಸಂದೀಪನ್ ಆಂಗ್ಲ ವಾಧ್ಯಮ ಶಾಲೆಯಲ್ಲಿ ಸಂಗೀತ ಶಿಕ್ಷಕರಾಗಿ ಸಾಂಸ್ಕೃತಿಕ ತಂಡದ ರೂವಾರಿಯಾಗಿ ಮಕ್ಕಳ ಕಲಾ ಪ್ರತಿಭೆಗೆ ನೀರೆರೆದಿದ್ದರು. ತಾಲೂಕು, ಜಿಲ್ಲೆ, ರಾಜ್ಯಮಟ್ಟದಲ್ಲಿ ವಿದ್ಯಾರ್ಥಿಗಳ ಪ್ರತಿಭೆ ಅನಾವರಣಗೊಳಿಸಿದ್ದ ಅವರು, ವಿದ್ಯಾರ್ಥಿಗಳ ಪ್ರೀತಿಯ ಮ್ಯೂಸಿಕ್ ಟೀಚರ್ ಆಗಿದ್ದರು. - ಬಿ.ಗಣೇಶ ಕಾರಂತ್, ಹಿರಿಯ ರಂಗಕರ್ಮಿ https://www.vijayavani.net/a-group-of-young-people-who-supported-the-victims https://www.vijayavani.net/agricultural-achiever-honored-with-panchavarna

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net