ಶ್ರೀನಿವಾಸ ಕಲ್ಯಾಣೋತ್ಸವ ಪ್ರವಚನ ನಾಳೆಯಿಂದ

WEB LOGO
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ನಗರದ ಸತ್ತೂರಿನ ನಾರಾಯಣ ಪಾರಾಯಣ ಬಳಗದ ಆಶ್ರಯದಲ್ಲಿ ಉದಯಗಿರಿಯ ಹನುಮಂತರಾವ ಪುರಾಣಿಕ ನಿವಾಸದಲ್ಲಿ ಡಿ. 26ರಿಂದ 29ರವರೆಗೆ ಶ್ರೀನಿವಾಸ ಕಲ್ಯಾಣೋತ್ಸವ ಪ್ರವಚನವನ್ನು ನಿತ್ಯ ಸಂಜೆ 6 ಗಂಟೆಯಿಂದ ಏರ್ಪಡಿಸಲಾಗಿದೆ.

ಪಂ. ನರಹರಿ ಆಚಾರ್ಯ ವಾಳ್ವೇಕರ ವಿಶೇಷ ಉಪನ್ಯಾಸ ನೀಡಲಿದ್ದಾರೆ. ನಾರಾಯಣಿ ಭಜನಾ ಮಂಡಳಿ ಅವರಿಂದ ಭಜನೆ, ಬಳಗದ ಸದಸ್ಯರಿಂದ ಶ್ರೀ ಹರಿ ವಾಯು ಗುರುಗಳ ಸ್ತೋತ್ರಗಳ ಪಾರಾಯಣ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ಕಾರ್ಯದರ್ಶಿ ರಘೋತ್ತಮ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net