ವರ್ಷದಲ್ಲಿ ಎರಡು ಬಾರಿ ಶ್ರೀನಿವಾಸ ಕಲ್ಯಾಣೋತ್ಸವ

8LNG01
Published on

ಲಿಂಗಸುಗೂರು: ಪಟ್ಟಣದ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಶ್ರೀನಿವಾಸ ಕಲ್ಯಾಣ ಮಹೋತ್ಸವ ಭಾನುವಾರ ನಡೆಯಿತು.

ಅರ್ಚಕ ರಾಮಕೃಷ್ಣ ಆಚಾರ್ ಮಾತನಾಡಿ, ವೇದವ್ಯಾಸರು ಬರೆದ ಭವಿಷ್ಯೋತ್ತರ ಪುರಾಣ ಮತ್ತು ಸ್ಕಂದ ಪುರಾಣದಲ್ಲಿ ಶ್ರೀನಿವಾಸ ಕಲ್ಯಾಣದ ಕುರಿತು ಉಲ್ಲೇಖವಾಗಿದೆ. ವರ್ಷದಲ್ಲಿ ಎರಡು ಬಾರಿ ಶ್ರೀನಿವಾಸ ಕಲ್ಯಾಣ ನಡೆಸುವ ಸಂಪ್ರದಾಯವಿದ್ದು, ವೈಶಾಖ ಶುದ್ಧ ದಶಮಿಯಂದು ಶ್ರೀನಿವಾಸ ಪದ್ಮಾವತಿಯನ್ನು ವಿವಾಹ ದಿನವಾದರೆ, ಆಶ್ವೀಜ ಶುದ್ಧ ದಶಮಿಯಂದು ತಿರುಪತಿಯಲ್ಲಿ ಬ್ರಹ್ಮೋತ್ಸವ ಆಚರಿಸಲಾಗುತ್ತದೆ ಎಂದರು.

ವಿಜಯ ದಶಮಿಯ ಶ್ರವಣ ನಕ್ಷತ್ರದಿಂದ ಬ್ರಹ್ಮೋತ್ಸವ ನಡೆಸುವ ಸಂಪ್ರದಾಯವಿದೆ. ಆಶ್ವಯುಜ ಮಾಸದಲ್ಲಿ 10 ದಿನ ಶ್ರೀನಿವಾಸ ಮತ್ತು ಪದ್ಮಾವತಿ ವಿಶ್ವಕರ್ಮರು ನಿರ್ಮಿಸಿದ ರಥದಲ್ಲಿ ತಿರುಮಲಕ್ಕೆ ಪ್ರಯಾಣ ಬೆಳೆಸಿದ ಪ್ರಯುಕ್ತ ತಿರುಪತಿಯಲ್ಲಿ 10 ದಿನ ಬ್ರಹ್ಮೋತ್ಸವ ನಡೆಸುವ ವಾಡಿಕೆಯಿದೆ ಎಂದು ರಾಮಕೃಷ್ಣ ಆಚಾರ್ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net