

ವಿಜಯವಾಣಿ ಸುದ್ದಿಜಾಲ ಕೋಟ
ಸಾಸ್ತಾನದ ಕಾರ್ತಿಕೇಯ ಎಸ್ಟೇಟ್‌ನಲ್ಲಿ ಲೋಕಕಲ್ಯಾಣಾರ್ಥ ಏ.1ರಿಂದ 3ರ ತನಕ ಸಾರ್ವಜನಿಕ ಶ್ರೀನಿವಾಸ ಕಲ್ಯಾಣೋತ್ಸವ ನಡೆಯಲಿದೆ. ಏ.1ರಂದು ಸಾಮೂಹಿಕ ಪ್ರಾರ್ಥನೆ ಸ್ವಸ್ತಿವಾಚನ, ಪುಣ್ಯಾಹವಾಚನ, ಮಹಾ ಗಣಪತಿಯಾಗ ಸಂಪನ್ನಗೊಳ್ಳಲಿದೆ. ಮಧ್ಯಾಹ್ನ 12 ರಿಂದ ಪೂರ್ಣಾಹುತಿ ನೆರವೇರಲಿದ್ದು, 3ರಿಂದ ಹೊರಕಾಣಿಕೆ ಮೆರವಣಿಗೆ, 2ರಂದು ಬೆಳಗ್ಗೆ 9ಕ್ಕೆ ಪ್ರಾರ್ಥನೆ, ನವಗ್ರಹ ಹೋಮ, 12ರಿಂದ ಪೂರ್ಣಾಹುತಿ ನೆರವೇರಲಿದೆ. 3ರಿಂದ ಪ್ರವೀಣ್ ಪಡುಕೆರೆ ನೇತೃತ್ವದಲ್ಲಿ ಕುಣಿತ ಭಜನೆ, 5.30ರಿಂದ ಪುತ್ತೂರು ಜಗದೀಶ್ ಆಚಾರ್ ಮತ್ತು ತಂಡದಿಂದ ಭಕ್ತಿರಸಮಂಜರಿ, ರಾತ್ರಿ 7ರಿಂದ ಡಾ.ವಿಜಯ ಮಂಜರ್ ಪಾಂಡೇಶ್ವರ ಅವರಿಂದ ಧಾರ್ಮಿಕ ಪ್ರವಚನ ನಡೆಯಲಿದೆ. ಬಳಿಕ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಉದ್ಘಾಟಿಸಲಿದ್ದಾರೆ. ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಅಧ್ಯಕ್ಷ ಎಂ.ಸಿ. ಚಂದ್ರಶೇಖರ್ ಪೂಜಾರಿ ಅಧ್ಯಕ್ಷತೆ ವಹಿಸುವರು. ಸಂಸದ ಕೋಟ ಶ್ರೀನಿವಾಸ್ ಪೂಜಾರಿ, ಶಾಸಕ ಕಿರಣ್ ಕುಮಾರ್ ಕೊಡ್ಗಿ, ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಪ್ರಮುಖರಾದ ಆನಂದ ಸಿ.ಕುಂದರ್, ಮಾರಣಕಟ್ಟೆ ಕೃಷ್ಣಮೂರ್ತಿ, ಡಾ.ವಿಜಯಮಂಜರ್, ಸುರೇಶ್ ಬೆಟ್ಟಿನ್,ಕೆ.ಎಸ್ ಕಾರಂತ, ಸುಕನ್ಯಾ ಹೆಗ್ಡೆ ಭಾಗವಹಿಸಲಿದ್ದಾರೆ. ಸತೀಶ್ ಕುಂದರ್, ಸುಶೀಲಾ ಪೂಜಾರಿ, ಸಕು, ಗೀತಾ ಖಾರ್ವಿ, ಜ್ಯೋತಿ ಭರತ್ ಶೆಟಿ, ಕಲ್ಯಾಣೋತ್ಸವ ಪ್ರಧಾನ ಕಾರ್ಯದರ್ಶಿ ಐರೋಡಿ ವಿಠ್ಠಲ್ ಪೂಜಾರಿ ಉಪಸ್ಥಿತರಿರುವರು. 3ರಂದು ಬೆಳಗ್ಗೆ 9ರಿಂದ ಸ್ಥಳಶುದ್ಧಿ, ಪುಣ್ಯಾಹವಾಚನ, ಸಾಮೂಹಿಕ ಸತ್ಯನಾರಾಯಣ ಪೂಜೆ, ಸಾಮೂಹಿಕ ವಿಷ್ಣು ಸಹಸ್ರನಾಮ ಪಾರಾಯಣ, ಮಧ್ಯಾಹ್ನ 12ರಿಂದ ಮಹಾಮಂಗಳಾರತಿ ನಡೆಯಲಿದ್ದು, ಸಂಜೆ ಪದ್ಮಾವತಿ ಸಹಿತ ಶ್ರೀನಿವಾಸ ದೇವರ ಶೋಭಾಯಾತ್ರೆ ನಡೆಯಲಿದೆ. ಸಂಜೆ 5ರಿಂದ ದೇವರ ವಿವಾಹ ಮಂಟಪ ಪ್ರವೇಶ, ಸೀಮಂತ ಪೂಜೆ, ವಿವಾಹ ಮಂಟಪಕ್ಕೆ ಪದ್ಮಾವತಿ ದೇವಿ ಆಗಮನ, ಸ್ವರ್ಣಮಣಿ ಬಂಧನ, ಮಹೂರ್ತ ನಿರೀಕ್ಷಣೆ, ಮಾಲಾಧಾರಣೆ ನೆರವೇರಲಿದ್ದು, ಸಂಜೆ 6.30ಕ್ಕೆ ಶ್ರೀನಿವಾಸ ಕಲ್ಯಾಣೋತ್ಸವ, ಮಂಗಳಸೂತ್ರ ಸಮರ್ಪಣೆ, ವಿವಾಹ ಹೋಮ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ ಎಂದು ಸಂಘಟಕರು ಮಾಹಿತಿ ನೀಡಿದ್ದಾರೆ.
ಡಾ.ವಿಜಯ ಮಂಜರ್ ಮಾರ್ಗದರ್ಶನದಲ್ಲಿ ಉದ್ಯಮಿ ಎಂ.ಸಿ ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ಐರೋಡಿ ವಿಠಲ ಪೂಜಾರಿ ಸಾರಥ್ಯದ ವಿವಿಧ ಸಮಿತಿಗಳು ಕಾರ್ಯೋನ್ಮುಖವಾಗಿವೆ. ಸುಮಾರು 30 ಸಾವಿರಕ್ಕೂ ಅಧಿಕ ಭಕ್ತರು ಕಲ್ಯಾಣೋತ್ಸವದಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ.