ಉತ್ಖನನ ಮೂಲಕ ಲಕ್ಷ್ಮೀನರಸಿಂಹ ಸಾನ್ನಿಧ್ಯ ನಿರ್ಮಾಣ: ಶಾಸಕ ಹರೀಶ್ ಪೂಂಜ ಹೇಳಿಕೆ

01
Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

500 ವರ್ಷಗಳ ಬಳಿಕ ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರ ಸ್ಥಾಪನೆಯಾದ ಕಾಲಘಟ್ಟದಲ್ಲಿ ನಾವಿದ್ದೇವೆ ಎಂಬುದೇ ಪುಣ್ಯದ ಕ್ಷಣ. ಅದೇ ರೀತಿ ನರಸಿಂಹಗಡದ ತಪ್ಪಲಿನಲ್ಲಿ ಮುಂದೆ ಉತ್ಖನ ನಡೆಸುವ ಮೂಲಕ ಶ್ರೀ ಲಕ್ಷ್ಮೀನರಸಿಂಸ ಸ್ವಾಮಿ ದೇವರ ಸಾನ್ನಿಧ್ಯ ನಿರ್ಮಾಣದ ಭವ್ಯ ಕ್ಷಣ ನಮ್ಮದಾಗಲಿ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.

ನಡ ಗ್ರಾಮದ ನರಸಿಂಹಗಡದ ತಪ್ಪಲಿನಲ್ಲಿರುವ ಶ್ರೀ ಲಕ್ಷ್ಮೀನಾರಾಯಣ ಭಜನಾ ಮಂದಿರ ವಠಾರದಲ್ಲಿ ಮೇ 3 ಮತ್ತು 4ರಂದು ನಡ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಶ್ರೀನಿವಾಸ ಕಲ್ಯಾಣೋತ್ಸವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಿಧಾನಪರಿಷತ್ ಸದಸ್ಯ ಕೆ.ಪ್ರತಾಪಸಿಂಹ ನಾಯಕ್, ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುರ್ಯಗುತ್ತು ಡಾ.ಎಸ್.ಸತೀಶ್ಚಂದ್ರ ಮಾತನಾಡಿದರು. ಮಂಗಳೂರು ಶ್ರೀ ನಾರಾಯಣಗುರು ಕಾಲೇಜು ಉಪನ್ಯಾಸಕಕ ಕೇಶವ ಬಂಗೇರ ಪ್ರಧಾನ ಭಾಷಣ ಮಾಡಿದರು.

ವಿಧಾನಪರಿಷತ್ ಮಾಜಿ ಸದಸ್ಯ ಕೆ.ಹರೀಶ್ ಕುಮಾರ್, ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಅಧ್ಯಕ್ಷ ಡಾ.ಪ್ರದೀಪ್ ಎ., ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರರಾದ ಶರತ್‌ಕೃಷ್ಣ ಪಡುವೆಟ್ನಾಯ, ಬಂಗಾಡಿ ಅರಮನೆಯ ಯಶೋಧರ ಬಲ್ಲಾಳ್, ಕಳೆಂಜ ನಂದಗೋಕುಲ ಗೋಶಾಲೆ ಅಧ್ಯಕ್ಷ ಡಾ.ಎಂ.ಎಂ.ದಯಾಕರ್, ಹಿರಿಯ ವಕೀಲ ಸುಬ್ರಹ್ಮಣ್ಯ ಕುಮಾರ್ ಅಗರ್ತ, ಜಿ.ಪಂ. ಮಾಜಿ ಉಪಾಧ್ಯಕ್ಷೆ ರಾಜಶ್ರೀ ಹೆಗ್ಡೆ, ನೇಮಿರಾಜ ಆರಿಗ, ಸಮಿತಿ ಪ್ರಧಾನ ಕಾರ್ಯದರ್ಶಿ ಕರುಣಾಕರ ಗೌಡ, ಕೋಶಾಧಿಕಾರಿ ಪುರುಷೋತ್ತಮ ಶೆಣೈ, ಚೆನ್ನಕೇಶವ ಗೌಡ, ಪ್ರಧಾನ ಸಂಚಾಲಕ ನವೀನ್ ನೆರಿಯ ಮತ್ತಿತರರು ಉಪಸ್ಥಿತರಿದ್ದರು. ಬೆಳ್ತಂಗಡಿ ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದಿಂದ ದೇವರ ಮೆರವಣಿಗೆಗೆ ಕೊಯ್ಯೂರು ನಂದಕುಮಾರ ತಂತ್ರಿಗಳು ಚಾಲನೆ ನೀಡಿದರು. ಬಳಿಕ ತಾಲೂಕಿನ ವಿವಿಧ ಭಜನಾ ತಂಡಗಳ ಮೂಲಕ ಭಜನಾ ಮೆರವಣಿಗೆ ನಡೆಯಿತು. ಸಾಮೂಹಿಕ ವಿಷ್ಣು ಸಹಸ್ರನಾಮ ಪಠಣ, ಧಾರ್ಮಿಕ ವಿಧಿವಿಧಾನಗಳು ನೆರವೇರಿದವು. ನಡ ಪೇಟೆಯಿಂದ ಶೋಭಾಯಾತ್ರೆ ನಡೆಯಿತು.

ನರಸಿಂಹಗಡದ ತಪ್ಪಲಿನಲ್ಲಿ ಪುರಾತನ ಸಾನ್ನಿಧ್ಯ ಇರುವ ಕುರಿತು 2018ರಲ್ಲಿ ನಂದಕುಮಾರ್ ತಂತ್ರಿಗಳು ಉಲ್ಲೇಖಿಸಿದ್ದರು. ಅವರ ಅಭಿಲಾಷೆಯಂತೆ ವಿಹಿಂಪ ಜತೆಗೂಡಿ ಶ್ರೀನಿವಾಸ ಕಲ್ಯಾಣೋತ್ಸವ ನಡೆಸುವ ಮೂಲಕ ಪುಣ್ಯ ಕ್ಷಣಕ್ಕೆ ನಾವೆಲ್ಲ ಸಾಕ್ಷಿಯಾಗಿದ್ದೇವೆ. ಮುಂದಿನ ದಿನಗಳಲ್ಲಿ ಜಾತಿ ಹಿಂದೆ ಸಾಗದೆ ನಾವೆಲ್ಲ ಹಿಂದುಗಳು ಎಂಬ ಭಾವನೆಯಡಿ ಒಟ್ಟಾಗಿ ದೇವಸ್ಥಾನ ನಿರ್ಮಾಣಕ್ಕೆ ಎಲ್ಲರೂ ಒಂದಾಗೋಣ. ಹರೀಶ್ ಪೂಂಜ ಶಾಸಕ https://www.vijayavani.net/harassment https://www.vijayavani.net/lorry-scooty-accident

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net