

ಕೆರೂರ: ಸಮೀಪದ ಕಾಡರಕೊಪ್ಪ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ಶ್ರೀನಿವಾಸ ನಾಯಕ, ಉಪಾಧ್ಯಕ್ಷರಾಗಿ ಮಂಜುನಾಥ ಮಾದರ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಎಸ್.ಕೆ.ಬೆಳವಲದ ಘೋಷಿಸಿದರು.
ಸಂಘದ ಕಾರ್ಯಾಲಯದಲ್ಲಿ ಬುಧವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಒಬ್ಬೊಬ್ಬರೆ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾದರು ಎಂದು ವಿವರಿಸಿದರು.
ನಿರ್ದೇಶಕರಾದ ಮನು ಹುಣಸಿಕಟ್ಟಿ, ಹೊಳಬಸು ಚಿಕ್ಕೂರ, ಗೋವಿಂದಗೌಡ ಹಳೆಮನಿ,ನೀಲಪ್ಪ ಸಣ್ಣಪ್ಪನವರ, ಮಂಜಪ್ಪ ಮುದಕವಿ, ಗೀರಿಶ ಸುಣಗದ, ಶ್ರೀದೇವಿ ಆಲೂರ, ಕಲಾವತಿ ನಾಯಕ, ಕಸ್ತೂರಿಬಾಯಿ ನಾಯಕ ಇದ್ದರು.
ಮುಖಂಡರಾದ ಆರ್.ಆರ್. ನಾಯಕ, ಭೀಮಣ್ಣ ನಾಯಕ, ಜ್ಞಾನೇಶ್ವರ ನಾಯಕ, ಹನುಮಂತ ಹುಣಸಿಕಟ್ಟಿ, ಮುತ್ತಣ್ಣ ಅರಕೇರಿ, ಹನುಮಂತ ದೇಸಾಯಿ, ಭೀಮಶಿ ನಾಯಕ, ಟಿ.ವಿ.ಸಂದಿಮನಿ, ಲಕ್ಷ್ಮಪ್ಪ ನಿಡೋಣಿ ಇದ್ದರು.