ಶ್ರೀ ಆಂಜನೇಯ ಸ್ವಾಮಿ ತೆಪ್ಪೋತ್ಸವ

web 3
Published on

ಶೃಂಗೇರಿ: ಶ್ರೀಮಠದಲ್ಲಿ ಶನಿವಾರ ತುಂಗಾ ಪುಷ್ಕರ ಮಹೋತ್ಸವ ಅಂಗವಾಗಿ ಬೆಳಗ್ಗೆ 8 ಗಂಟೆಗೆ ತುಂಗಾ ನದಿಗೆ ಕಲ್ಪೋಕ್ತ ಪೂಜೆ ನೆರವೇರಿಸಲಾಯಿತು. ಬಳಿಕ ತುಂಗಾ ಕಲಶವನ್ನು ಉತ್ಸವದಲ್ಲಿ ತಂದು ಶ್ರೀ ಶಾರದೆ, ಶ್ರಿ ಶಂಕರ ಭಗವತ್ಪಾದರು ಹಾಗೂ ಶ್ರೀ ವಿದ್ಯಾಶಂಕರ ದೇವರ ಸನ್ನಿಧಿಯಲ್ಲಿ ಅಭಿಷೇಕ ನೆರವೇರಿಸಲಾಯಿತು.

ರಾತ್ರಿ ಜಗದ್ಗುರುಗಳಾದ ಶ್ರೀ ಭಾರತೀ ತೀರ್ಥ ಸ್ವಾಮೀಜಿ ಮತ್ತು ಶ್ರೀ ವಿಧುಶೇಖರ ಸ್ವಾಮೀಜಿಗಳು ತುಂಗೆ, ಶ್ರೀ ವರಾಹಮೂರ್ತಿ ಹಾಗೂ ಶಾರದೆಯ ಸಾಲಂಕೃತಗೊಂಡ ವಿಗ್ರಹಗಳಿಗೆ ಪುಷ್ಪಾರ್ಚನೆಗೈದು ಪೂಜೆ ಸಲ್ಲಿಸಿದರು.

ಅಲಂಕರಿಸಿದ ದೋಣಿಯಲ್ಲಿ ಕುಳ್ಳಿರಿಸಿದ ಶ್ರೀ ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸಿದ ಬಳಿಕ ತೆಪ್ಪೋತ್ಸವ ನೆರವೇರಿತು. ವೇದಘೊಷಗಳೊಂದಿಗೆ ಮಠದ ಪುರೋಹಿತರು ತುಂಗಾರತಿ ಬೆಳಗಿದರು. ಮಹಿಳೆಯರು ತುಂಗೆಗೆ ಜ್ಯೋತಿಗಳನ್ನು ಸಮರ್ಪಿಸಿದರು. ಭಾನುವಾರ ಬೆಳಗ್ಗೆ ಶ್ರೀ ಶಾರದೆ ಸನ್ನಿಧಿಯಲ್ಲಿ ಲಕ್ಷಾರ್ಚನೆ ಹಾಗೂ ರಾತ್ರಿ ಶ್ರೀ ಶಂಕರ ಭಗವತ್ಪಾದರ ತೆಪ್ಪೋತ್ಸವ ಜರುಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net