

ಹುಬ್ಬಳ್ಳಿ: ಶೃಂಗೇರಿಯ ಶ್ರೀ ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನಂ ದಕ್ಷಿಣಾಮ್ನಾಯ ಶಾರದಾ ಪೀಠಂ ಶ್ರೀ ಭಾರತಿತೀರ್ಥ ಸ್ವಾಮೀಜಿಗಳ ಕರಕಮಲ ಸಂಜಾತರಾದ ಜಗದ್ಗುರು ಶ್ರೀ ವಿಧುಶೇಖರಭಾರತೀ ತೀರ್ಥ ಸ್ವಾಮೀಜಿ ಅವರ ವಿಜಯಯಾತ್ರೆಯು ಏ. 15ರಂದು ತಾಲೂಕಿನ ಪಾಲಿಕೊಪ್ಪದ ಶ್ರೀ ಕ್ಷೇತ್ರ ಶಿವಶಕ್ತಿಧಾಮಕ್ಕೆ ಆಗಮಿಸಲಿದೆ.
ಅಂದು ಸಂಜೆ 4.30ಕ್ಕೆ ಶ್ರೀವಿಧುಶೇಖರಭಾರತೀ ತೀರ್ಥ ಸ್ವಾಮೀಜಿಗಳು ಆಗಮಿಸಲಿದ್ದು, ಪೂರ್ಣಕುಂಭ ಸ್ವಾಗತ, ಧೂಳಿಪಾದಪೂಜೆ ನಡೆಯಲಿದೆ.
ಏ. 16ರಂದು ರಾತ್ರಿ 8.30ಕ್ಕೆ ಶ್ರೀಗಳಿಂದ ಚಂದ್ರಮೌಳೀಶ್ವರ ಪೂಜೆ ನಂತರ ಪ್ರಸಾದ ವಿತರಣೆ ನಡೆಯಲಿದೆ. ಏ. 17ರಂದು ಬೆಳಗ್ಗೆ 8ಕ್ಕೆ ಶ್ರೀಗಳಿಂದ ಶಿವಶಕ್ತಿಧಾಮದಲ್ಲಿ ಶ್ರೀ ಆನಂದೇಶ್ವರ ಸ್ವಾಮಿಗೆ ಮಹಾಪೂಜೆ, ಫಲಮಂತ್ರಾಕ್ಷತೆ, ಪ್ರಸಾದ ವಿತರಣೆ ನಡೆಯಲಿದೆ ಎಂದು ಪಾಲಿಕೊಪ್ಪದ ಶ್ರೀಕ್ಷೇತ್ರ ಶಿವಶಕ್ತಿಧಾಮ ಆರಾಧನಾ ಟ್ರಸ್ಟ್ ಪ್ರಕಟಣೆ ತಿಳಿಸಿದೆ.