ಶೃಂಗೇರಿಯಲ್ಲಿ ಶ್ರಾವಣ ಸೋಮವಾರದ ಪೂಜೆ ಸಂಭ್ರಮ

web 1
Published on

ಶೃಂಗೇರಿ: ಶ್ರೀ ಶಾರದಾ ಮಠದಲ್ಲಿ ಶ್ರಾವಣ ಸೋಮವಾರ ಪೂಜೆಗೆ ತನ್ನದೇ ಆದ ಮಹತ್ವ, ಹಿನ್ನೆಲೆ ಹೊಂದಿದೆ. ಮಠದಲ್ಲಿ ಶ್ರೀ ಚಂದ್ರಮೌಳೀಶ್ವರ ಸ್ವಾಮಿಗೆ ಜಗದ್ಗುರುಗಳು ನೆರವೇರಿಸುವ ಪೂಜೆ ವೀಕ್ಷಿಸಲು ಪ್ರತಿ ವರ್ಷ ಭಕ್ತರು ಮಠಕ್ಕೆ ಆಗಮಿಸುತ್ತಿದ್ದರು. ಈ ಬಾರಿ ಕರೊನಾ ಸೋಂಕಿನಿಂದಾಗಿ ಟಿವಿಯಲ್ಲಿ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ.

ಶ್ರೀ ಆದಿಶಂಕರ ಭಗವತ್ಪಾದರು ಶ್ರೀಮಠದಲ್ಲಿ ಪ್ರತಿದಿನ ಭಗವಂತನ ಆರಾಧನೆ ನಡೆಸುವ ಸಂಕಲ್ಪದಿಂದ ಶ್ರೀ ಶಾರದಾಂಬೆ ಹಾಗೂ ಶ್ರೀ ಚಂದ್ರಮೌಳೀಶ್ವರರ ಪೂಜೆ ನಡೆಸಬೇಕು ಎಂಬ ಅಪ್ಪಣೆ ಮಾಡಿ ಶ್ರೀ ಸುರೇಶ್ವರಾಚಾರ್ಯರಿಗೆ ಶ್ರೀ ಚಂದ್ರಮೌಳೀಶ್ವರ ಲಿಂಗ ಹಾಗೂ ಶ್ರೀ ರತ್ನಗರ್ಭ ಗಣಪತಿ ನೀಡಿದರು.

ನರಸಿಂಹವನದ ಗುರುನಿವಾಸದಲ್ಲಿ ಶ್ರಾವಣ ಮಾಸದ ಪ್ರತಿ ಸೋಮವಾರ ಮಧ್ಯಾಹ್ನ ಸ್ವತಃ ಯತಿವರ್ಯರು ಶ್ರೀ ಚಂದ್ರಮೌಳೀಶ್ವರ ಸ್ವಾಮಿಗೆ ಅನೇಕ ವಿಧವಾದ ಫಲ, ಪುಷ್ಪ್ಪಾ-ಪಂಚಾಮೃತ ಅಭಿಷೇಕಗಳಿಂದ ವಿಶೇಷ ಪೂಜೆ ನಡೆಸುತ್ತಾರೆ. ಭವ್ಯವಾದ ಚಿನ್ನದ ಮಂಟಪದಲ್ಲಿ ಶ್ರೀ ಚಂದ್ರಮೌಳೀಶ್ವರ, ರತ್ನಗರ್ಭ ಗಣಪತಿ, ಆದಿ ಶಂಕರಾಚಾರ್ಯರು, ಸರಸ್ವತಿ, ಮಹಾಲಕ್ಷ್ಮೀ, ಬಂಗಾರದ ಮತ್ತು ಸ್ಪ್ಪಕದ ಶ್ರೀ ಚಕ್ರಗಳು, ಸೀತಾರಾಮ, ಗಣಪತಿ, ಜಗದ್ಗುರುಗಳಾದ ಶ್ರೀ ನೃಸಿಂಹಭಾರತೀ ಹಾಗೂ ಶ್ರೀ ಸಚ್ಚಿದಾನಂದ ಮಹಾಸ್ವಾಮೀಜಿಗಳ ಪಾದುಕೆಗಳನ್ನು ಕಾಣಬಹುದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net