ತುಂಗಾ ನದಿಗೆ ಕಲ್ಪೋಕ್ತ ಪೂಜೆ

web 2
Published on

ಶೃಂಗೇರಿ: ಶ್ರೀ ಶಾರದಾ ಮಠದಲ್ಲಿ ತುಂಗಾ ಪುಷ್ಕರದ ಅಂಗವಾಗಿ ಬೆಳಗ್ಗೆ 8 ಗಂಟೆಗೆ ತುಂಗಾ ನದಿಗೆ ಕಲ್ಪೋಕ್ತ ಪೂಜೆ ನಡೆಸಿ ತುಂಗಾಕಲಶ ಜಲವನ್ನು ಉತ್ಸವದಲ್ಲಿ ತರಲಾಯಿತು. ನಂತರ ಶ್ರೀ ಶಾರದಾಂಬ, ಶ್ರೀ ಶಂಕರ ಭಗವತ್ಪಾದರು ಹಾಗೂ ಶ್ರೀ ವಿದ್ಯಾಶಂಕರ ಸನ್ನಿಧಿಯಲ್ಲಿ ಅಭಿಷೇಕ ನೆರವೇರಿಸಲಾಯಿತು.

ರಾತ್ರಿ ಶ್ರೀಮಠದ ಉಭಯ ಶ್ರೀಗಳು ತುಂಗಾ ದಡದಲ್ಲಿರುವ ತುಂಗೆ, ಶ್ರೀ ವರಾಹಮೂರ್ತಿ, ಶ್ರೀ ಶಾರದಾ ವಿಗ್ರಹಕ್ಕೆ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಶ್ರೀಮಠದ ಋತ್ವಿ್ವರು ತುಂಗಾರತಿ ಬೆಳಗಿದರು. ತಾಲೂಕಿನ ಭಕ್ತರು ಸಂಭ್ರದಿಂದ ತೆಪ್ಪೋತ್ಸವದಲ್ಲಿ ಭಾಗವಹಿಸಿದ್ದರು. ನ.26ರಂದು ಶ್ರೀ ಜನಾರ್ದನ ಸ್ವಾಮಿ ಸನ್ನಿಧಿಯಲ್ಲಿ ಲಕ್ಷ ತುಳಸಿ ಅರ್ಚನೆ ಹಾಗೂ ರಾತ್ರಿ ಶ್ರೀ ಜನಾರ್ದನ ಸ್ವಾಮಿ ತೆಪ್ಪೋತ್ಸವ ಜರುಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net