ಶೃಂಗೇರಿ ಶಾರದಾಂಬೆಗೆ ಪಂಚಾಮೃತಾಭಿಷೇಕ

web 1
Published on

ಶೃಂಗೇರಿ: ವೈಶಾಖ ಕೃಷ್ಣ ಪಾಡ್ಯದ ದಿನ ಶುಕ್ರವಾರ ಶಾರದಾಂಬೆಗೆ ವಿವಿಧ ಫಲ, ಪಂಚಾಮೃತಗಳಿಂದ ಮಹಾಭಿಷೇಕ ನೆರವೇರಿಸಲಾಯಿತು. ಅಭಿಷೇಕದ ವೇಳೆ ಮಠದ ಋತ್ವಿಜರು ಶ್ರೀರುದ್ರ ಹಾಗೂ 108 ಶ್ರೀಸೂಕ್ತ ಪಠಿಸಿದರು. ಜಗದ್ಗುರುಗಳಾದ ಶ್ರೀ ಭಾರತೀ ತೀರ್ಥರು ಹಾಗೂ ವಿಧುಶೇಖರ ಭಾರತಿ ಶ್ರೀ ಸಮ್ಮುಖದಲ್ಲಿ ಮಹಾನೀರಾಜನ ಬೆಳಗಲಾಯಿತು. 34ನೇ ಪೀಠಾಧಿಪತಿಗಳಾದ ಜಗದ್ಗುರು ಶ್ರೀ ಚಂದ್ರಶೇಖರ ಭಾರತೀ ಸ್ವಾಮೀಜಿ ನೂತನವಾಗಿ ನಿರ್ವಿುಸಿದ ಶ್ರೀ ಶಾರದಾಂಬೆಯ ಶಿಲಾಮಯ ದೇವಾಲಯಕ್ಕೆ ನಳ ಸಂವತ್ಸರದ ವೈಶಾಖ ಕೃಷ್ಣ ಪಾಡ್ಯದ ದಿನ 1916ರ ಮೇ 18ರಂದು ಕುಂಭಾಭಿಷೇಕ ನೆರವೇರಿಸಿದ್ದರು. ಅಂದಿನಿಂದ ವರ್ಷಕ್ಕೆ ಮೂರು ಬಾರಿ ಶಾರದಾಂಬೆಗೆ ಮಹಾಭಿಷೇಕ ನಡೆಸಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net