ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಅಡ್ಡಿಪಡಿಸಿದವರನ್ನು ಬಂಧಿಸಿ ಕರೆದುಕೊಂಡು ಹೋಗುತ್ತಿದ್ದ ಪೊಲೀಸ್ ವಾಹನ ಅಡ್ಡಗಟ್ಟಿ ಪ್ರತಿಭಟನೆ

web 2
Published on

ಕೊಪ್ಪ: ಶೃಂಗೇರಿಯಲ್ಲಿ ಎಬಿವಿಪಿ, ನಕ್ಸಲ್ ವಿರೋಧಿ ವೇದಿಕೆ, ಶ್ರೀರಾಮ ಸೇನೆ ಸೇರಿ ವಿವಿಧ ಸಂಘಟನೆ 30ಕ್ಕೂ ಹೆಚ್ಚು ಕಾರ್ಯಕರ್ತರನ್ನು ಬಂಧಿಸಿ ವಾಹನಗಳಲ್ಲಿ ಎನ್.ಆರ್.ಪುರಕ್ಕೆ ಕರೆದೊಯ್ಯುವಾಗ ಸಂಘಪರಿವಾರ ಕಾರ್ಯಕರ್ತರು ಬಲಗಾರು ಘಾಟಿ ಸಮೀಪ ವಾಹನಗಳನ್ನು ಅಡ್ಡಗಟ್ಟಿ ಪ್ರತಿಭಟಿಸಿದರು.

ಎರಡು ಪೊಲೀಸ್ ಬಸ್ ಹಾಗೂ ಎರಡು ಜೀಪ್​ಗಳನ್ನು ಅಡ್ಡಗಟ್ಟಿದ್ದರಿಂದ ರಸ್ತೆಯಲ್ಲಿ ಕೆಲ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಸಂಘ ಪರಿವಾರದವರು ಎಸ್ಪಿ ಹರೀಶ್ ಪಾಂಡೆ, ಕಲ್ಕುಳಿ ವಿಠ್ಠಲ್ ಹೆಗ್ಗಡೆ ಅವರ ವಿರುದ್ಧ ಘೊಷಣೆ ಕೂಗಿ ರಸ್ತೆಯಲ್ಲಿ ಕುಳಿತು ಪ್ರತಿಭಟಿಸಲು ಮುಂದಾದಾರು. ಆಗ ಪೊಲೀಸರು ಮತ್ತು ಪ್ರತಿಭಟನಾಕಾರರ ಮಧ್ಯೆ ಮಾತಿನ ಚಕಮಕಿ ನಡೆಯಿತು.

ಪೊಲೀಸರ ಮನವಿಗೆ ಸ್ಪಂದಿಸಿ ಪ್ರತಿಭಟನಾಕಾರರು ಕೊಪ್ಪದ ಬಾಳಗಡಿಯಲ್ಲಿರುವ ದ್ಯಾವೇಗೌಡ ಸಮುದಾಯ ಭವನದವರೆಗೆ ನಡೆದುಕೊಂಡು ಬಂದರು. ರಸ್ತೆ ಉದ್ದಕ್ಕೂ ಸಮ್ಮೇಳನ ಅಧ್ಯಕ್ಷರ, ಪೊಲೀಸ್ ಇಲಾಖೆ ವಿರುದ್ಧ ಘೋಷಣೆ ಕೂಗಿದರು. ಸಂಜೆ ಪೊಲೀಸರು ಎಲ್ಲರನ್ನೂ ಕಳುಹಿಸಿದರು.

ಎಬಿವಿಪಿ ಜಿಲ್ಲಾ ಸಂಚಾಲಕ್ ಶಶಾಂಕ್ ಗುತ್ತಿ, ಬಜರಂಗದಳ ಜಿಲ್ಲಾ ಸಹ ಸಂಚಾಲಕ್ ಶಶಾಂಕ್ ಹೇರೂರು, ಸಂತೋಷ್ ಕೋಟ್ಯಾನ್, ಆದರ್ಶ, ದಿವೀರ್ ಮಲ್ನಾಡ್, ಅವಿನಾಶ್ ಕುಂಚೇಬೈಲು, ಜಿಪಂ ಸದಸ್ಯ ರಾಮಸ್ವಾಮಿ, ಶಿವಶಂಕರ್, ಹರೀಶ್ ಶೆಟ್ಟಿ, ಉದಯ್ ಆನೆಗುಂದ, ಬಿಜೆಪಿ ಮಂಡಲ ಅಧ್ಯಕ್ಷ ಅದ್ದಡ ಸತೀಶ್, ದಿನೇಶ್ ಹೊಸೂರ್, ಸುರೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net