

ಸೋಮವಾರಪೇಟೆ: ಕಕ್ಕೆಹೊಳೆ ಸಮೀಪದ ಶ್ರೀಮುತ್ತಪ್ಪಸ್ವಾಮಿ ಮತ್ತು ಶ್ರೀಅಯ್ಯಪ್ಪಸ್ವಾಮಿ ದೇವಾಲಯದ ಮರು ಪ್ರತಿಷ್ಠಾಪನಾ ವಾರ್ಷಿಕೋತ್ಸವವನ್ನು ಶೃದ್ಧಾಭಕ್ತಿಯಿಂದ ಭಾನುವಾರ ಆಚರಿಸಲಾಯಿತು.
ಕೇರಳದ ಕಾಳೇಘಾಟ್‌ನ ತಂತ್ರಿಗಳಾದ ನಾರಾಯಣ ನಂಬೂದರಿ ಅವರು ಎರಡು ದಿನಗಳು ಧಾರ್ಮಿಕ ವಿಧಿವಿಧಾನಗಳೊಂದಿಗೆ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು.
ಶ್ರೀಮುತ್ತಪ್ಪಸ್ವಾಮಿ ದೇವಾಲಯದಲ್ಲಿ ಗಣಪತಿ ಹೋಮದೊಂದಿಗೆ ಪೂಜೆಗಳು ಜರುಗಿದವು. ನಂತರ ಶ್ರೀಮುತ್ತಪ್ಪನ್, ಶ್ರೀತಿರುವಪ್ಪನ್, ವಿಷ್ಣುಮೂರ್ತಿ ಮತ್ತು ಪರಿವಾರ ದೇವರುಗಳು, ಶ್ರೀಅಯ್ಯಪ್ಪಸ್ವಾಮಿ, ಭುವನೇಶ್ವರಿ, ಕನ್ನಿಮೂಲ ಗಣಪತಿ ಮತ್ತು ನಾಗದೇವರುಗಳಿಗೆ ಅಭಿಷೇಕ, ಅಲಂಕಾರದೊಂದಿಗೆ ಪೂಜೆ ಸಲ್ಲಿಸುವ ಮೂಲಕ ವಾರ್ಷಿಕ ಪೂಜೆ ಸಂಪನ್ನಗೊಂಡಿತು.
ದೇವಾಲಯದ ಪ್ರಧಾನ ಅರ್ಚಕ ಮಣಿಕಂಠನ್ ನಂಬೂದರಿ, ದೇವಾಲಯ ಸಮಿತಿ ಅಧ್ಯಕ್ಷ ಎನ್.ಡಿ.ವಿನೋದ್‌ಕುಮಾರ್ ಮತ್ತು ಪದಾಧಿಕಾರಿಗಳು ಎರಡು ದಿನಗಳು ಜರುಗಿದ ಪೂಜಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.