ನಾವಿನ್ಯತೆ ಮೈಗೂಡಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಡಾ.ಅಮೃತ್ ನಾಣಯ್ಯ ಕರೆ

16mdkj1 - Copy
Published on

ವಿಜಯವಾಣಿ ಸುದ್ದಿಜಾಲ ಶ್ರೀಮಂಗಲ

ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ನಾವಿನ್ಯತೆ ಮೈಗೂಡಿಸಿಕೊಳ್ಳಬೇಕೆಂದು ಖ್ಯಾತ ವೈದ ಡಾ.ಅಮೃತ್ ನಾಣಯ್ಯ ಕರೆ ನೀಡಿದರು.
ಇತ್ತೀಚೆಗೆ ಆಯೋಜಿಸಿದ್ದ ಜೆಸಿ ವಿದ್ಯಾಸಂಸ್ಥೆ ೩೩ನೇ ವಾರ್ಷಿಕೋತ್ಸವ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಮಗೆ ಸಿಗುವ ಅವಕಾಶ ಸದುಪಯೋಗ ಪಡಿಸಿಕೊಂಡು ಮುಂದೆ ಬರಬೇಕೆಂದರು.

ಮುಖ್ಯಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ವಿರಾಜಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಬೀಳಗಿ, ಸಮಯದ ಮಹತ್ವ ಅರಿತು ಶ್ರದ್ಧೆ ಹೆಚ್ಚಿಸಿಕೊಳ್ಳಬೇಕೆಂದರು. ವಿದ್ಯಾಸಂಸ್ಥೆ ಅಧ್ಯಕ್ಷ ಕೋಟ್ರಂಗಡ ಸುಬ್ರಮಣಿ, ಕರೆಸ್ಪಾಂಡೆಂಟ್ ಮಚ್ಚಮಾಡ ಸುರೇಶ್, ಆಡಳಿತಾಧಿ ಕಾರಿ ಕೋಟ್ರಂಗಡ ತಿಮ್ಮಯ್ಯ, ಟ್ರಸ್ಟಿಗಳಾದ ಕೋಟ್ರಂಗಡ ಯಶೋಧಾ, ಕೋಟ್ರಂಗಡ ಸುನಿಲ್ ಸುಬ್ಬಯ್ಯ, ಮಚ್ಚಮಾಡ ಅಪ್ಪಣ್ಣ, ಮುಖ್ಯಶಿಕ್ಷಕರಾದ ಎನ್.ಬಿ. ಸತೀಶ್, ಕೆ.ಕೆ. ಸಿಂಧೂ ಇದ್ದರು.

ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನಗೊಂಡಿತು. ಕೋಟ್ರಂಗಡ ತಿಮ್ಮಯ್ಯ ಸ್ವಾಗತಿಸಿದರು. ಪ್ರಸನ್ನ, ಚಂಚಲ ನಿರೂಪಿಸಿದರು. ಬಿಂದುಸಾರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net