ಶ್ರೀಮೈಲಾರಲಿಂಗೇಶ್ವರ ಸ್ವಾಮಿ ಅದ್ದೂರಿ ಉತ್ಸವ

15 BIRUR 01
Published on

ಬೀರೂರು: ಬೀರೂರಿನ ಶ್ರೀಮೈಲಾರಲಿಂಗೇಶ್ವರ ಸ್ವಾಮಿಯ ಅದ್ದೂರಿ ಉತ್ಸವ ಪ್ರಮುಖ ರಾಜಬೀದಿಗಳಲ್ಲಿ ಜರುಗಿತು. ಭಾನುವಾರ ನಡೆದ ದಸರಾ ಕಾರ್ಣಿಕ ಮಹೋತ್ಸವದ ಅಂಗವಾಗಿ ಪುಷ್ಪಾಲಂಕಾರ ಮತ್ತು ವಿದ್ಯುತ್ ದೀಪಾಲಂಕಾರದಿಂದ ಅಲಂಕೃತಗೊಂಡಿದ್ದ ವಾಹನದಲ್ಲಿ ಶ್ರೀಸ್ವಾಮಿಯ ಉತ್ಸವ ಮೂರ್ತಿಗೆ ಬೃಹದಾಕಾರದ ಪುಷ್ಪ ಮಾಲಿಕೆ ಅರ್ಪಿಸಿ ಪ್ರತಿಷ್ಠಾಪಿಸಲಾಗಿತ್ತು. ವಾದ್ಯಗೋಷ್ಠಿಗಳು ಮತ್ತು ಗೊರವಯ್ಯನವರ ಗಂಟೆ ಹಾಗೂ ಡಮರುಗದ ನಾದದಲ್ಲಿ ಉತ್ಸವ ಹೊರಟು ಮಹಾತ್ಮ ಗಾಂಧಿ ವೃತ್ತದಲ್ಲಿ ಮದ್ದು ಗುಂಡಿನ ಪ್ರದರ್ಶನ ಮತ್ತು ಗೊರವಯ್ಯನವರ ಕುಣಿತ ನೋಡುಗರ ಕಣ್ಮನ ಸೆಳೆಯಿತು.
ನಂತರ ಬಿ.ಹೆಚ್.ರಸ್ತೆ ಮಾರ್ಗವಾಗಿ ರಾಮದೇವರ ಬೀದಿಯಿಂದ ಹಳೇಪೇಟೆ ತಲುಪಿ ಮತ್ತೆ ಅಜ್ಜಂಪುರ ರಸ್ತೆ ಸೇರಿದಂತೆ ವಿವಿಧ ರಾಜಬೀದಿಗಳಲ್ಲಿ ಮೆರವಣಿಗೆ ಮೂಲಕ ಮೂಲಸ್ಥಾನ ಸೇರಿತು. ದಾರಿಯುದ್ದಕ್ಕೂ ಭಕ್ತಾದಿಗಳು ಶ್ರೀಸ್ವಾಮಿಗೆ ಮಂಗಳಾರತಿ ಮಾಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net