ಶ್ರೀಕೃಷ್ಣ ಸಂಧಾನ ಕಥಾನಕ ಯಕ್ಷಗಾನ

Drama 6x4
Published on

ಕುಮಟಾದ ಯಕ್ಷಗಾನ ಸಂಶೋಧನಾ ಕೇಂದ್ರ, ನಗರದ ಭಕ್ತಿಗೌರವ ಗೀತಾ ಕೇಂದ್ರದ ವತಿಯಿಂದ ಆ.26ರಂದು ಸಂಜೆ 5.30ಕ್ಕೆ ಕಲಾಮಂದಿರದಲ್ಲಿ ಯಕ್ಷಗಾನ ಸಂಜೆ ಕಾರ್ಯಕ್ರಮ ಆಯೋಜಿಸಲಾಗಿದೆ.


ಮಹಾಭಾರತದಲ್ಲಿನ ಒಂದು ಪ್ರಮುಖ ಅಧ್ಯಾಯವಾದ ‘ಶ್ರೀಕೃಷ್ಣ ಸಂಧಾನ’ ಕಥಾನಕವನ್ನು ಯಕ್ಷಗಾನ ಆಧರಿಸಿದೆ. ಮುಮ್ಮೇಳದಲ್ಲಿ ಶ್ರೀಕೃಷ್ಣ ವೇಷದಲ್ಲಿ ಕಲಗದ್ದೆ ವಿನಾಯಕ ಹೆಗಡೆ , ಕೌರವ ಪಾತ್ರದಲ್ಲಿ ಕುಮುಟಾ ಡಾ.ಜಿ.ಎಲ್.ಹೆಗಡೆ, ವಿದುರ ಪಾತ್ರದಲ್ಲಿ ಮೈಸೂರಿನ ದಿವಾಕರ ಹೆಗಡೆ, ಕರ್ಣ ಪಾತ್ರದಲ್ಲಿ ವೆಂಕಟೇಶ ಬಗ್ರಿಮಕ್ಕಿ ಅಭಿನಯಿಸುತ್ತಿದ್ದಾರೆ. ಹಿಮ್ಮೇಳದಲ್ಲಿ ಕೊಳಗಿಯ ಕೇಶವ ಹೆಗಡೆ (ಭಾಗವತರು), ಯಲ್ಲಾಪುರದ ಶಂಕರ ಭಾಗವತ (ಮದ್ದಳೆ ), ಸಂತೂರಿನ ಗಜಾನನ ಹೆಗಡೆ(ಚಂಡೆ) ಸಾಥ್ ನೀಡಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net