ಶ್ರೀಕೃಷ್ಣ ಜಯಂತಿಯ ಬೈಕ್ ರ‌್ಯಾಲಿ

Srikrishna Jayanti, Challakere, Bike Rally,
Published on

ಚಳ್ಳಕೆರೆ: ಶ್ರೀಕೃಷ್ಣ ಜಯಂತ್ಯುತ್ಸವದ ಅಂಗವಾಗಿ ತಾಲೂಕು ಯಾದವ ಸಂಘ ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬೈಕ್ ರ‌್ಯಾಲಿ ನಡೆಯಿತು.

ನಗರದ ಕಾಟಪ್ಪನಹಟ್ಟಿ ರಂಗನಾಥಸ್ವಾಮಿ ದೇವಸ್ಥಾನದಿಂದ ಆರಂಭಗೊಂಡ ಶ್ರೀಕೃಷ್ಣ ಭಾವಚಿತ್ರದ ಮೆರವಣಿಗೆ, ಬೈಕ್ ರ‌್ಯಾಲಿ ನೆಹರು, ಅಂಬೇಡ್ಕರ್, ವಾಲ್ಮೀಕಿ ವೃತ್ತದ ಮಾರ್ಗವಾಗಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.

ರ‌್ಯಾಲಿಗೆ ಚಾಲನೆ ನೀಡಿದ ಸಂಘದ ತಾಲೂಕಾಧ್ಯಕ್ಷ ಅಧ್ಯಕ್ಷ ಟಿ.ರವಿಕುಮಾರ್ ಮಾತನಾಡಿ, ಗುರುವಾರ ಶ್ರೀಕೃಷ್ಣ ಜಯಂತಿ ಹಮ್ಮಿಕೊಂಡಿದ್ದು, ಶಾಸಕರಾದ ಟಿ.ರಘುಮೂರ್ತಿ, ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್, ಎಂಎಲ್‌ಸಿ ನಾಗರಾಜ್ ಯಾದವ್, ಮಾಜಿ ಸದಸ್ಯೆ ಸಿ.ಜಯಮ್ಮ ಬಾಲರಾಜ್ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ವಕೀಲ ಶಶಿಧರ್, ಮುಖಂಡರಾದ ಜಿ.ಕೆ.ವೀರಣ್ಣ, ಹಟ್ಟಿ ರುದ್ರಪ್ಪ, ಕಾಟಪ್ಪನಹಟ್ಟಿ ವೀರೇಶ, ಚಿಕ್ಕಣ್ಣ, ಕಾಂತರಾಜ್, ಬಾನು, ಬೆಳಗೆರೆ ಸುರೇಶ್, ಮಹಲಿಂಗಪ್ಪ, ರಾಜು, ನಾಗರಾಜ್, ಮಂಜುನಾಥ, ಶ್ರೀನಿವಾಸ್, ಅಜ್ಜಣ್ಣ, ಮಂಜಣ್ಣ, ಚಂದ್ರಪ್ಪ, ಬೂದಿಹಳ್ಳಿ ರಾಜು, ಶ್ರೀಧರ್, ವೀರೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net