

ಮುಂಡರಗಿ: ಪಟ್ಟಣದ ಶ್ರೀ ಶಿರಡಿ ಸಾಯಿಬಾಬಾ ದೇವಸ್ಥಾನದಲ್ಲಿ ಸೆ.6 ರಂದು ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ವಿಶೇಷ ಪೂಜಾ ಕೈಂಕರ್ಯಗಳು ಜರುಗಲಿವೆ.
ಸಾಯಿಬಾಬಾ ಮೂರ್ತಿಗೆ ಬೆಳಗ್ಗೆ 6:30ಕ್ಕೆ ಮಂಗಲ ಸ್ನಾನ, 7 ಗಂಟೆಗೆ ಕಾಕಡಾರತಿ, 7:30ಕ್ಕೆ ಪಂಚಾಮೃತ ಅಭಿಷೇಕ, ಮಹಾಭಿಷೇಕ, ರುದ್ರಾಭಿಷೇಕ, ಕ್ಷೀರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಕುಂಕುಮಾರ್ಚನೆ, ಅಲಂಕಾರ, 9 ಗಂಟೆಗೆ ಶ್ರೀ ಕೃಷ್ಣನ ತೊಟ್ಟಿಲೋತ್ಸವ, 10:30ಕ್ಕೆ ಭಜನೆ ಮಹಾ ಮಂಗಳಾರತಿ, 11 ಗಂಟೆಗೆ ಮಹಾಪ್ರಸಾದ ವಿತರಣೆ, ಸೂರ್ಯಾಸ್ತ ವೇಳೆ ಧೂಪಾರತಿ, ರಾತ್ರಿ 9 ಗಂಟೆಗೆ ಶೇಜಾರತಿ ನಡೆಯಲಿದೆ ಎಂದು ಸಾಯಿ ಸದ್ಭಕ್ತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.