ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಮೆರವಣಿಗೆ

Untitled design(4)
ಅಳವಂಡಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಶ್ರೀಕೃಷ್ಣನ ಭಾವಚಿತ್ರದ ಮೆರವಣಿಗೆ ದ್ದೂರಿಯಾಗಿ ನಡೆಯಿತು. ಪ್ರಮುಖರಾದ ಯಲ್ಲಪ್ಪ, ಡಾ,ಪ್ರಿಯರಂಜನ, ರಮೇಶ, ಮಾರುತಿ, ಬಸವರಾಜ, ಕೇಶಪ್ಪ ಇತರರಿದ್ದರು.
Published on

ಅಳವಂಡಿ: ಗ್ರಾಮದಲ್ಲಿ ಶ್ರೀಕೃಷ್ಣ ಸೇವಾ ಸಂಘ ಹಾಗೂ ಗ್ರಾಮಸ್ಥರು ಹಮ್ಮಿಕೊಂಡಿದ್ದ ಶ್ರೀಕೃಷ್ಣ ಜಯಂತೋತ್ಸವದ ಅಂಗವಾಗಿ ಭಾವಚಿತ್ರದ ಮೆರವಣಿಗೆಯನ್ನು ಗುರುವಾರ ಅದ್ದೂರಿಯಾಗಿ ಮಾಡಲಾಯಿತು.

ಶ್ರೀಕೃಷ್ಣನಿಗೆ, ಗೋಮಾತೆಗೆ ಪೂಜೆ

ಬೆಳಗ್ಗೆ ಶ್ರೀಕೃಷ್ಣನಿಗೆ ವಿಶೇಷ ಪೂಜೆ ಹಾಗೂ ಗೋಮಾತೆಗೆ ಪೂಜೆ ಸಲ್ಲಿಸಲಾಯಿತು. ತಳಿರು, ತೋರಣ, ಹೂ ಹಾಗೂ ವಿವಿಧ ಅಲಂಕಾರಿಕ ವಸ್ತುಗಳಿಂದ ಸಿಂಗರಿಸಿದ ತೆರೆದ ವಾಹನದಲ್ಲಿ ಶ್ರೀಕೃಷ್ಣನ ಭಾವಚಿತ್ರವನ್ನು ಮಹಿಳೆಯರ ಕಳಸ ಹಾಗೂ ಸಕಲ ವಾದ್ಯ ಮೇಳದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು. ನಂತರ ಜನರಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಿತು.

ಇದನ್ನೂ ಓದಿ:

ಪ್ರಮುಖರಾದ ಯಲ್ಲಪ್ಪ ಕರಡಿ, ಡಾ.ಪ್ರಿಯರಂಜನ್, ಬಸವರಾಜ ಹಟ್ಟಿ, ಕೇಶಪ್ಪ ಮಾಕಾಳಿ, ಹನುಮಂತಪ್ಪ ಗುನ್ನಳ್ಳಿ, ಮಾರುತಿ ಮಾಕಾಳಿ, ರಾಜಣ್ಣ ಹಾವಿನ, ರಮೇಶ ಕರಡಿ, ಗೋಣೆಪ್ಪ, ಪರಮೇಶಪ್ಪ, ಸಂತೋಷ, ಗ್ಯಾನಪ್ಪ, ಮಾರುತೆಪ್ಪ, ಹನುಮಂತ, ಮಂಜುನಾಥ, ಬಸವರಾಜ, ಗಿರಿಯಪ್ಪ, ಯಂಕಣ್ಣ, ಶಿವಪ್ಪ, ಪಕಣ್ಣ, ಲಕ್ಷ್ಮಣ, ಶಿವಗ್ಯಾನಪ್ಪ, ಗೌಡಪ್ಪ, ವೆಂಕಟೇಶ, ಶಿವಪ್ಪ, ವಿನಾಯಕ, ವೆಂಕನಗೌಡ, ರವಿಕುಮಾರ, ಆಂಜನೇಯ, ಮಲ್ಲಪ್ಪ, ರಾಜು, ಶ್ರೀನಿವಾಸ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net