ಸೇವಾ ಸದನದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

New Seava Sadana
Published on

ಹುಬ್ಬಳ್ಳಿ : ಇಲ್ಲಿನ ಕೇಶ್ವಾಪೂರ ಬನಶಂಕರಿ ಬಡಾವಣೆಯ ಸೇವಾ ಸದನದಲ್ಲಿರುವ ಸೇವಾ ಭಾರತಿ ಟ್ರಸ್ಟ್​ನ ಮಾತೃಛಾಯಾ ಬಾಲ ಕಲ್ಯಾಣ ಕೇಂದ್ರದಿಂದ ಭಾನುವಾರದಂದು ಶ್ರೀಕೃಷ್ಣ ಜನ್ಮಾಷ್ಟಮಿ ಆಚರಿಸಲಾಯಿತು.

ಸೇವಾ ಸದನದ ಮಕ್ಕಳಿಂದ ನಡೆದ ಶ್ರೀ ಕೃಷ್ಣನ ರೂಪಕಗಳು ನೆರೆದಿದ್ದ ಜನಮನ ಸೂರೆಗೊಂಡವು.

ಶ್ರೀ ಕೃಷ್ಣನಿಗೆ ಸುವಿಸ್ತಾರ ಅಭಿಷೇಕ, ಆರತಿ, 108 ಸಿಹಿ ತಿಂಡಿಗಳು, ಉಯ್ಯಾಲೆ ಸೇವೆ ಮತ್ತಿತರ ಸೇವೆಗಳನ್ನು ಅರ್ಪಿಸಲಾಯಿತು. ಬೆಣ್ಣೆ ಮತ್ತು ಸಕ್ಕರೆ ಸೇರಿದಂತೆ ಅನೇಕ ವಿಶೇಷ ತಿನಿಸುಗಳನ್ನು ಶ್ರೀ ಕೃಷ್ಣನಿಗೆ ಅರ್ಪಿಸಲಾಯಿತು. ಶ್ರೀ ಕೃಷ್ಣನ ಲೀಲೆಗಳನ್ನು ಆಧರಿಸಿದ ಸಂಗೀತ, ನೃತ್ಯ ಸೇವೆಗಳನ್ನು ಭಕ್ತರು ಅರ್ಪಿಸಿದರು. ಪುಟ್ಟ ಮಕ್ಕಳಿಗೆ ರಾಧಾ-ಕೃಷ್ಣ ವೇಷಭೂಷಣಗಳನ್ನು ತೊಡಿಸಲಾಗಿತ್ತು. ಮಕ್ಕಳು ಕೃಷ್ಣನ ವೇಷದಲ್ಲಿ ಮಿಂದೆದ್ದರು.

ಕೃಷ್ಣಜನ್ಮಾಷ್ಠಮಿ ನಿಮಿತ್ತ ಬನಶಂಕರಿ ಬಾಡಾವಣೆ ಹಾಗೂ ವಿನಯ ಕಾಲನಿಯ ಮುಖ್ಯ ಬೀದಿಗಳಲ್ಲಿ ಶೋಭಾಯಾತ್ರೆ ನಡೆಸಲಾಯಿತು.

ಮಾತೃಛಾಯಾ ಬಾಲಕಲ್ಯಾಣ ಕೇಂದ್ರದ ಅಧ್ಯಕ್ಷೆ ಕಮಲಾ ಜೋಶಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಭಾರತಿ ನಂದಕುಮಾರ, ಜ್ಯೋತಿ ಪ್ರಲ್ಹಾದ ಜೋಶಿ, ಸವಿತಾ ಓದುಗೌಡರ ಹಾಗೂ ಇತರರು ಇದ್ದರು. ವೀಣಾ ಮಳಿಯೇ ಸ್ವಾಗತಿಸಿದರು. ಮಾತಾಜಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net