ಜೆಎಸ್‌ಎಸ್ ಶ್ರೀ ಮಂಜುನಾಥೇಶ್ವರ ಶಾಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ

h26-jss
Published on

ಹುಬ್ಬಳ್ಳಿ: ನಗರದ ಜೆಎಸ್‌ಎಸ್ ಶ್ರೀ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಸೋಮವಾರ ಸಂಭ್ರಮದಿಂದ ಆಚರಿಸಲಾಯಿತು.
ಮುಖ್ಯೋಪಾಧ್ಯಾಯಿನಿ ರಜನಿ ಪಾಟೀಲ ಅವರು ಶ್ರೀ ಕೃಷ್ಣನ ಜನನ, ಕೃಷ್ಣನಿಗೆ ಕೊಳ್ಳಲು ಬಂದಿದ್ದು, ನವಿಲುಗರಿ, ಬೃಂದಾವನದ ರಾಸಲೀಲೆ ಹಾಗೂ ಕೃಷ್ಣನು ಮಡಿಕೆ ಒಡೆಯುವ ಪ್ರಸಂಗಗಳನ್ನು ವಿವರಿಸಿದರು.
9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳು ಮೊಸರಿನ ಗಡಿಗೆ ಒಡೆಯುವ ಮೂಲಕ ಆಕರ್ಷಿಸಿದರು.
9 ಮತ್ತು 10ನೇ ತರಗತಿ ವಿದ್ಯಾರ್ಥಿನಿಯರಿಂದ ನೃತ್ಯ ಪ್ರದರ್ಶನ ನಡೆಯಿತು. ಎಲ್ಕೆಜಿ ಮತ್ತು ಯುಕೆಜಿ ಮಕ್ಕಳು, ಕೃಷ್ಣ- ರಾಧೆಯರ ವೇಷ ಧರಿಸಿ ಗಮನ ಸೆಳೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net