ಬನಹಟ್ಟಿ ಹಂಸವೇಣಿ ಶಾಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ

Srikrishna Janmashtami at Banahatti Hamsaveni School
ಬನಹಟ್ಟಿಯ ಹಂಸವೇಣಿ ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ಶಾಲೆಯಲ್ಲಿ ನಡೆದ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಕೃಷ್ಣೆ-ರಾಧೆಯರ ವೇಷದಲ್ಲಿ ಮಿಂಚಿದ ಮಕ್ಕಳು.
Published on

ರಬಕವಿ/ಬನಹಟ್ಟಿ: ಭಗವಾನ್ ಶ್ರೀಕೃಷ್ಣನು ಪ್ರಪಂಚದಲ್ಲಿನ ಮೂರು ಗುಣಗಳಾದ ಸದ್ಗುಣ, ರಜೋಗುಣ ಮತ್ತು ತಮೋಗುಣಗಳ ಉಸ್ತುವಾರಿಯಾಗಿದ್ದರು ಎಂದು ಬನಹಟ್ಟಿಯ ಹಂಸವೇಣಿ ಶಾಲೆ ಅಧ್ಯಕ್ಷ ಸಂಗಮೇಶ ಗುಟ್ಲಿ ತಿಳಿಸಿದರು.

ಶ್ರೀಕೃಷ್ಣ ಜನ್ಮಾಷ್ಟಮಿ ನಿಮಿತ್ತ ಶಾಲೆ ಆವರಣದಲ್ಲಿ ಮಕ್ಕಳಿಗೆ ಬುಧವಾರ ಹಮ್ಮಿಕೊಂಡಿದ್ದ ಕೃಷ್ಣನ ವೇಷ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಶ್ರೀಕೃಷ್ಣ ಜನ್ಮಾಷ್ಟಮಿ ನಿಮಿತ್ತ ಶಾಲೆ ವಿದ್ಯಾರ್ಥಿಗಳು ಕೃಷ್ಣ ಮತ್ತು ರಾಧೆಯರ ವೇಷಭೂಷಣ ಧರಿಸಿ ಅತ್ಯಂತ ಅರ್ಥ ಪೂರ್ಣವಾಗಿ ಆಚರಿಸಿದ್ದು ಸಂತಸ ತಂದಿದೆ ಎಂದರು.

ಶಾಲೆಯ ಕೋ ಆರ್ಡಿನೇಟರ್ ಉಷಾ ಗುಟ್ಲಿ, ಶಿಕ್ಷಕಿಯರಾದ ಅಶ್ವಿನಿ ಸಿದ್ದವಗೋಳ, ಪ್ರಿಯಾಂಕಾ ಗುಟ್ಲಿ, ಸುನಂದಾ ದಿವಾನದಾರ, ಪ್ರಿಯಾಂಕ ಬುದ್ನಿ, ಭಾಗ್ಯಶ್ರೀ ಮಂಡಿ, ಪ್ರತಿಭಾ ರಾಠಿ, ಗೀತಾ ಬುರ್ಲಿ, ಸಿಮಾರನ್ ಮಹಾಲಿಂಗಪುರ, ಜ್ಯೋತಿ ಪಕೀರಪುರ, ಜ್ಯೋತಿ ಕಾಡದೇವರ, ರಜಿಯಾ ದರ್ವೇಶಿ, ಶಶಿಕಲಾ ಪತ್ತಾರ, ಜ್ಯೋತಿ ಕತ್ತಿ ಹಾಗೂ ಪಾಲಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net