ಶ್ರೀಕೀರ್ತಿನಾರಾಯಣಸ್ವಾಮಿ ಜಾತ್ರೆ ಇಂದಿನಿಂದ

ತಲಕಾಡು ಶ್ರೀ ಕೀರ್ತಿನಾರಾಯಣಸ್ವಾಮಿ
ತಿ.ನರಸೀಪುರ ತಾಲೂಕಿನ ತಲಕಾಡು ಪಂಚನಾರಾಯಣ ಕೇತ್ರದ ಶ್ರೀ ಕೀರ್ತಿನಾರಾಯಣಸ್ವಾಮಿ ದೇವಾಲಯ ಹಾಗೂ ಮೂಲಮೂರ್ತಿ.
Published on

ತಿ.ನರಸೀಪುರ: ಪಂಚನಾರಾಯಣ ಕೇತ್ರದಲ್ಲಿ ಒಂದಾದ ತಾಲೂಕಿನ ತಲಕಾಡು ಶ್ರೀ ಕೀರ್ತಿನಾರಾಯಣಸ್ವಾಮಿ ಜಾತ್ರಾ ಮಹೋತ್ಸವ ಮೇ 1ರಿಂದ 12ರವರೆಗೆ ಜರುಗಲಿದ್ದು, ಬ್ರಹ್ಮ ರಥೋತ್ಸವ ಮೇ 9ರಂದು ನೆರವೇರಲಿದೆ.

ಮೇ 1ರಂದು ಬೆಳಗ್ಗೆ ಪಂಚಾಮೃತ ಸ್ಥಾಪನ ನೀರಾಜನ ಶಾತ್ತುಮೊರೈ, ತೀರ್ಥಪ್ರಸಾದ ವಿನಿಯೋಗ, ದೇವತಾ ಪ್ರಾರ್ಥನೆ, ಅನುಜ್ಞೆ ಆಚಾರ, ಋಕ್ರಣ ವಾಸುದೇವ ಪುಣ್ಯಾಹ, ಅಂಕುರಾರ್ಪಣ, ಧ್ವಜಪ್ರತಿಷ್ಠಾಂಗ ಅಧಿವಾಸರಗಳು ನೀರಾಜನ ನಡೆಯಲಿದೆ.

ಮೇ 2ರಂದು ಬೆಳಗ್ಗೆ ಧ್ವಜಾರೋಹಣ, ಭೇರಿತಾಡನ ಪೂರ್ವಕ ಯಾಗಶಾಲಾ ಪ್ರವೇಶ, ಅಗ್ನಿಮುಖ ಶ್ರೀರಾಮಾನುಜಾಚಾರ್ಯ ಅವರ ತಿರುನಕ್ಷತ್ರ ಪ್ರಯುಕ್ತ ತಿರುವೀಧಿ ಉತ್ಸವ 1ನೇ ತಿರುನಾಳ್, 3ರಂದು ಶೇಷವಾಹನೋತ್ಸವ ನೀರಾಜನ 2ನೇ ತಿರುನಾಳ್ ಜರುಗಲಿದೆ.

ಮೇ 4ರಂದು ತಿರುವೀಧಿ ದೊಡ್ಡ ಗರುಡೋತ್ಸವ ನೀರಾಜನ 3ನೇ ತಿರುನಾಳ್. ಮೇ 5ರಂದು ಪುಷ್ಪಮಂಟಪೋತ್ಸವ ನೀರಾಜನ 4ನೇ ತಿರುನಾಳ್. ಮೇ 6ರಂದು ಪ್ರಹ್ಲಾದ ಪರಿಪಾಲನೋತ್ಸವ, ಪೂರ್ವಕ ಗರುಡೋತ್ಸವ ನೀರಾಜನ, 5ನೇ ತಿರುನಾಳ್ ಜರುಗಲಿದೆ.

ಮೇ 7ರಂದು ಚಿಕ್ಕ ಕಲ್ಯಾಣೋತ್ಸವ, ಗಂಜೇಂದ್ರ ಮೋಕ್ಷ ನೀರಾಜನ, 6ನೇ ತಿರುನಾಳ್, 8ರಂದು ಮಂಟಪೋತ್ಸವಗಳು ಯಾತ್ರಾಧಾನ ಪೂರಕ ಬೆಳಗ್ಗೆ 11.20 ರಿಂದ 12.20 ರೊಳಗೆ ಸಲ್ಲುವ ಶುಭ ಕಟಕ ಲಗ್ನದಲ್ಲಿ ಶ್ರೀ ಮದ್ದಿವ್ಯ ಬ್ರಹ್ಮರಥಾರೋಹಣ ತೀರ್ಥಪ್ರಸಾದ ವಿನಿಯೋಗ, ರಾತ್ರಿ ಶಾಂತ್ಯೋತ್ಸವ ನೀರಾಜನ, 7ನೇ ತಿರುನಾಳ್ ಜರುಗಲಿದೆ. ಮೇ 9ರಂದು ಶಯನೋತ್ಸವ ತೀರ್ಥಪ್ರಸಾದ ವಿನಿಯೋಗ ನೀರಾಜನ 8ನೇ ತಿರುನಾಳ್, ನೀರಾಜನ ವಿನಿಯೋಗ ನೆರವೇರಲಿದೆ. ಮೇ 10ರಂದು ತಿರುಕಾವೇರಿ ನದಿಯಲ್ಲಿ ಅವಕೃತ-ತೀರ್ಥಸ್ನಾನ, ರಾತ್ರಿ ಪುಷ್ಪ ಪಲ್ಲಕ್ಕಿ ಉತ್ಸವ ನೀರಾಜನ 9ನೇ ತಿರುನಾಳ್ ನಡೆಯಲಿದೆ.

ಮೇ 11ರಂದು ಬೆಳಗ್ಗೆ ಮಹಾಭಿಷೇಕ ತೀರ್ಥಪ್ರಸಾದ ವಿನಿಯೋಗ, ದ್ವಾದಶಾರಾಧನೆ, ಆಂಜನೇಯ ವಾಹನೋತ್ಸವ, ಧ್ವಜಾವರೋಹಣ, ಪುಷ್ಪಯಾಗ, ರಾಷ್ಟ್ರಾಶೀರ್ವಾದ ತೀರ್ಥಪ್ರಸಾದ ನೀರಾಜನ ವಿನಿಯೋಗ ನಡೆಯಲಿದೆ.

ಮೇ 12ರಂದು ಬೆಳಗ್ಗೆ ಶ್ರೀಯವರ ಪ್ರತಿಷ್ಠಾಪನಾ ಮಾಸ ತಿರುನಕ್ಷತ್ರ ಪ್ರಯುಕ್ತ ಪಂಚಾಮೃತ ಸಪನಶಾತ್ತುಮೊರೈ, ತೀರ್ಥಪ್ರಸಾದ, ತಿರುಕಲ್ಯಾಣೋತ್ಸವ ಗಜೇಂದ್ರಮೋಕ್ಷ ನೀರಾಜನ 6ನೇ ತಿರುನಾಳ್ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net