ಕಣಕಟ್ಟೆಯಲ್ಲಿ ಶ್ರೀಕರಿಯಮ್ಮ ದೇವಿ ಜಾತ್ರೆ

IMG-20240507-WA0344
Published on

ಅರಸೀಕೆರೆ ಗ್ರಾಮಾಂತರ: ತಾಲೂಕಿನ ಕಣಕಟ್ಟೆ ಗ್ರಾಮದೇವತೆ ಶ್ರೀಕರಿಯಮ್ಮ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ದೇವರಿಗೆ ಮಂಗಳವಾರ ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ, ಸುಮಂಗಲಿಯರಿಂದ ಲಲಿತಾ ಸಹಸ್ರನಾಮ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು.


ಭಾನುವಾರದಿಂದ ಜಾತ್ರಾ ಮಹೋತ್ಸವ ಆರಂಭವಾಗಿದ್ದು, ಶುಕ್ರವಾರ ಸಮಾಪ್ತಿಯಾಗಲಿದೆ. ಜಾತ್ರಾ ಮಹೋತ್ಸವದಲ್ಲಿ ಬಾನ,ಬೇವಿನ ಉಡಿಗೆ, ಚೋಮನಕುಣಿತ, ಬಾಯಿಬೀಗ, ಉಯ್ಯಲೆ ಉತ್ಸವಗಳು ಜರುಗಲಿವೆ.


ಗ್ರಾಮದ ಶ್ರೀಮೂರು ಕಣ್ಣು ಮಾರಮ್ಮ, ವೀರಭದ್ರೇಶ್ವರಸ್ವಾಮಿ, ಚೌಡಮ್ಮ, ಶ್ರೀ ಲಕ್ಷ್ಮೀನಾರಾಯಣಸ್ವಾಮಿ, ಆಲದ ಮಾರಮ್ಮ ದೇವರುಗಳಿಗೂ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಲಿವೆ ಎಂದು ದೇವಸ್ಥಾನದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net