ದಕ್ಷಿಣ ಶಿಕ್ಷಕರ ಕ್ಷೇತ್ರದ ಟಿಕೆಟ್ ಹಂಚಿಕೆ ಸಂಬಂಧ ಶ್ರೀಕಂಠೇಗೌಡ ಅಸಮಾಧಾನ

Former MLC KT Srikanthegowda press conference mandya
Published on

ಮೈಸೂರು: ಒಂದೆಡೆ ದಕ್ಷಿಣ ಶಿಕ್ಷಕರ ಕ್ಷೇತ್ರದ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿ ವಿವೇಕಾನಂದ ಅವರಿಗೆ ವರಿಷ್ಠರು ಬಿ ಫಾರಂ ನೀಡಿದ್ದರೆ, ಇನ್ನೊಂದೆಡೆ ಜೆಡಿಎಸ್‌ನಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಎಂಎಲ್‌ಸಿ ಕೆ.ಟಿ.ಶ್ರೀಕಂಠೇಗೌಡ ಅಸಮಾಧಾನಗೊಂಡಿದ್ದು, ತಮಗೇ ಟಿಕೆಟ್ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ.

‘ವಿವೇಕಾನಂದ ಅವರಿಗೆ ಬಿ ಫಾರಂ ಕೊಟ್ಟ ವಿಚಾರ ನನಗೆ ಗೊತ್ತೇ ಇಲ್ಲ. ಟಿಕೆಟ್ ಸಂಬಂಧ ಆಪ್ತರ ಮತ್ತು ಶಿಕ್ಷಕರ ಸಭೆ ಕರೆದಿದ್ದೇನೆ. ಾಮಪತ್ರ ಸಲ್ಲಿಸಲು ನಾನು ಸಿದ್ಧತೆ ಮಾಡಿಕೊಂಡಿದ್ದೇನೆ. ಮೈತ್ರಿ ಅಭ್ಯರ್ಥಿಯಾಗಿ ನಾನು ನಾಮಪತ್ರ ಸಲ್ಲಿಸುತ್ತೇನೆ.ನಿಮ್ಮ ಬಳಿ ಮತಯಾಚನೆಗೆ ಬರುತ್ತಿದ್ದೇನೆ. ನನ್ನೆಲ್ಲಾ ಶಿಕ್ಷಕ ವೃಂದದವರ ಕುಂದುಕೊರತೆಗಳನ್ನು ಪರಿಷತ್ತಿನಲ್ಲಿ ಎಲ್ಲರ ಮುಂದಿಟ್ಟು ಸಮಸ್ಯೆಗಳನ್ನು ಬಗೆಹರಿಸುತ್ತೇನೆ. ಈ ಪ್ರಯತ್ನಕ್ಕೆ ಮತ್ತೊಮ್ಮೆ ಶಿಕ್ಷಕ ವೃಂದದವರು ಆಶೀರ್ವಾದ ಮಾಡುವಂತೆ ಪ್ರಾರ್ಥಿಸುತ್ತಿದ್ದೇನೆ’ ಎಂದು ಶ್ರೀಕಂಠೇಗೌಡ ಮನವಿ ಮಾಡಿದ್ದಾರೆ. ಹೀಗಾಗಿ, ಶ್ರೀಕಂಠೇಗೌಡರ ನಡೆ ಕುತೂಹಲ ಮೂಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net