ಸಹಕಾರ ಸಂಘಕ್ಕೆ ಶ್ರೀಕಂಠೇಗೌಡ ಅಧ್ಯಕ್ಷ

29 HRS 03
???????
Published on


ಹಾಸನ: ಹಿರೀಸಾವೆ ಹೋಬಳಿಯ ಮತಿಘಟ್ಟ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಶ್ರೀಕಂಠೇಗೌಡ ಅವಿರೋಧವಾಗಿ ಆಯ್ಕೆಯಾದರು.
ಇತ್ತೀಚೆಗೆ ತೆರವಾಗಿದ್ದ ಮತಿಘಟ್ಟ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ಚುನಾವಣೆ ನಿಗಧಿಯಾಗಿತ್ತು. ಶ್ರೀಕಂಠೇಗೌಡ ಹೊರತುಪಡಿಸಿ ಮತ್ಯಾರು ನಾಮಪತ್ರ ಸಲ್ಲಿಸದ ಕಾರಣ ಅವರನ್ನೇ ಚುನಾವಣಾಧಿಕಾರಿಗಳು ಅವಿರೋಧವಾಗಿ ಆಯ್ಕೆ ಘೋಷಿಸಿದ್ದಾರೆ.


ಸಂಘವು 12 ಮಂದಿ ನಿರ್ದೇಶಕರ ಬಲ ಹೊಂದಿದ್ದು ಎಲ್ಲ ನಿರ್ದೇಶಕರು ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಉಪನಿಬಂಧಕರ ಕಚೇರಿಯ ಅಧಿಕಾರಿ ಲೀಲಾ ಅವರು ಚುನಾವಣಾ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು.


ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾದ ಶ್ರೀಕಂಠೇಗೌಡ ಅವರನ್ನು ಸಂಘದ ವತಿಯಿಂದ ಅಭಿನಂಧಿಸಲಾಯಿತು. ಉಪಾಧ್ಯಕ್ಷ ರಾಮು, ಮಾಜಿ ಅಧ್ಯಕ್ಷ ಎ.ಜಿ.ಪ್ರಭಾಕರ್, ನಿರ್ದೇಶಕರಾದ ಎಂ.ಎನ್.ಕಾಂತರಾಜ್, ಎಸ್.ಎನ್.ಗಂಗಾಧರ್, ಗವಿರಂಗೇಗೌಡ, ಶಿವಣ್ಣ, ಹನುಮಂತೇಗೌಡ, ಎಸ್.ಸುರೇಶ್, ಎಂ.ಎಸ್.ದಿವಾಕರ್, ಶಕುಂತಲಾ ನಂಜುಂಡಸ್ವಾಮಿ, ಸುಮತಿ ರಂಗೇಗೌಡ, ಕಾರ್ಯನಿರ್ವಹಣಾಧಿಕಾರಿ ಮಧು, ಮೇಲ್ವಿಚಾರಕ ಮಧು, ಪ್ರಮುಖರಾದ ಜಿಕೆವಿಕೆ ದೇವರಾಜ್, ರಮೇಶ್ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net