ಶ್ರೀಕಾಂತ ಅಧ್ಯಕ್ಷ, ಪ್ರತಾಪ ಉಪಾಧ್ಯಕ್ಷ

2
Published on

ನಿಪ್ಪಾಣಿ: ಸ್ಥಳೀಯ ಮಹಾತ್ಮ ಶ್ರೀಬಸವೇಶ್ವರ ಸೌಹಾರ್ದ ಸಹಕಾರಿಗೆ ಅಧ್ಯಕ್ಷರಾಗಿ ಶ್ರೀಕಾಂತ ಪರಮನೆ, ಉಪಾಧ್ಯಕ್ಷರಾಗಿ ಪ್ರತಾಪ ಪಟ್ಟಣಶೆಟ್ಟಿ ಅವಿರೋಧವಾಗಿ ಆಯ್ಕೆಯಾದರು ಎಂದು ಚುನಾವಣಾಧಿಕಾರಿ ಎಂ.ಆರ್.ಪತ್ತಾರ ಘೋಷಿಸಿದರು.

ನಗರದ ಮಹಾತ್ಮ ಶ್ರೀಬಸವೇಶ್ವರ ಸೌಹಾರ್ದ ಸಹಕಾರಿ ಕಾರ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಚುನಾವಣೆ ಪ್ರಕ್ರಿಯೆಯಲ್ಲಿ ಅರೋಧವಾಗಿ ಆಯ್ಕೆಯಾದರು.

ಬಳಿಕ ಆಡಳಿತ ಮಂಡಳಿ ಸದಸ್ಯರು ಅಧ್ಯಕ್ಷ ಶ್ರೀಕಾಂತ ಪರಮನೆ, ಉಪಾಧ್ಯಕ್ಷ ಪ್ರತಾಪ ಪಟ್ಟಣಶೆಟ್ಟಿ ಅವರನ್ನು ಸನ್ಮಾನಿಸಿದರು.

ಸಂಸ್ಥಾಪಕ ಅಧ್ಯಕ್ಷ ಡಾ.ಚಂದ್ರಕಾಂತ ಕುರಬೆಟ್ಟಿ, ಸಂಚಾಲಕ ಸುರೇಶ ಶೆಟ್ಟಿ, ಡಾ.ಶಂಕರಗೌಡ ಪಾಟೀಲ, ಮಹೇಶ ಬಾಗೇವಾಡಿ, ಅಶೋಕ ಲಿಗಾಡೆ, ಸದಾನಂದ ಧುಮಾಲೆ, ಪ್ರತಾಪ ಮೇತ್ರಾಣಿ, ಸದಾಶಿವ ಧನಗರ, ದಿನೇಶ ಪಾಟೀಲ, ಗಜಾನನ ವಸೇದಾರ, ಉಮೇಶ ಖೋತ, ಸೋಮನಾಥ ಪರಮನೆ, ಅಪ್ಪಾಸಾಹೇಬ ಪರಮನೆ, ವಕೀಲ ಸುಭಾಷ ಉತ್ತುರೆ, ಸಿಇಒ ಶಶಿಕಾಂತ ಆದನ್ನವರ, ರಾಜೇಂದ್ರ ಖರಾಬೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net