

ಹುಬ್ಬಳ್ಳಿ: ಶ್ರೀಕಾಂತ ಪೂಜಾರಗೆ ಜಾಮೀನು ನೀಡುವಂತೆ ಇಲ್ಲಿಯ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ಗುರುವಾರ ನಡೆದಿದ್ದು, ಜಾಮೀನಿನ ತೀರ್ಪು ಜ. 5ರಂದು ಕಾಯ್ದಿರಿಸಿದೆ.
ಶ್ರೀಕಾಂತ ಪೂಜಾರಗೆ ಜಾಮೀನು ನೀಡುವಂತೆ ಕೋರಿ ವಿಶ್ವ ಹಿಂದು ಪರಿಷತ್ ಮಹಾನಗರ ಜಿಲ್ಲಾಧ್ಯಕ್ಷ, ವಕೀಲ ಸಂಜೀವ ಬಡಸ್ಕರ್ ಬುಧವಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಗುರುವಾರ ಬೆಳಗ್ಗೆ ಕೋರ್ಟ್ ಕೈಗೆತ್ತಿಕೊಂಡಿತು. ಸರ್ಕಾರಿ ವಕೀಲೆ ಅಮರಾವತಿ ಅವರಿಗೆ ತಕರಾರು ಸಲ್ಲಿಸುವಂತೆ ಕೋರ್ಟ್ ಸೂಚನೆ ನೀಡಿತ್ತು. ಮಧ್ಯಾಹ್ನವೇ ತಕರಾರು ಸಲ್ಲಿಕೆಯಾಗಿದ್ದರಿಂದ ಎರಡೂ ಕಡೆಯ ವಕೀಲರ ವಾದ-ವಿವಾದ ಆಲಿಸಿದ ನ್ಯಾಯಾಧೀಶರು ಜ. 5ರಂದು ಜಾಮೀನು ಅರ್ಜಿಯ ತೀರ್ಪು ಕಾಯ್ದಿರಿಸಿದ್ದಾರೆ ಎಂದು ವಕೀಲ ಸಂಜೀವ ಬಡಸ್ಕರ ‘ವಿಜಯವಾಣಿ’ಗೆ ತಿಳಿಸಿದ್ದಾರೆ.