ಶ್ರೀಗಳ ರಜತ ಮೂರ್ತಿ ಮೆರವಣಿಗೆ

AMGD6-1
ಪ್ರಭುಶಂಕರೇಶ್ವರ ಗಚ್ಚಿನಮಠದ ಲಿಂ. ರಾಜಗುರು ಪ್ರಭುರಾಜೇಂದ್ರ ಶ್ರೀಗಳ ರಜತ ಮೂರ್ತಿ ಹಾಗೂ ಶಂಕರರಾಜೇಂದ್ರ ಶ್ರೀಗಳ ಜಂಗಮೋತ್ಸವ ಅಂಗವಾಗಿ ಅಮೀನಗಡದಲ್ಲಿ ಅಡ್ಡಪಲ್ಲಕ್ಕಿ ಮೆರವಣಿಗೆ ನಡೆಸಲಾಯಿತು.
Published on

ಅಮೀನಗಡ: ಪಟ್ಟಣದ ಪ್ರಭುಶಂಕರೇಶ್ವರ ಗಚ್ಚಿನಮಠದ ಲಿಂ.ರಾಜಗುರು ಪ್ರಭುರಾಜೇಂದ್ರ ಸ್ವಾಮೀಜಿ ಜನ್ಮಶತಮಾನೋತ್ಸವ ಅಂಗವಾಗಿ ಭಾನುವಾರ ಲಿಂ.ಪ್ರಭುರಾಜೇಂದ್ರ ಶ್ರೀಗಳ ರಜತ ಮೂರ್ತಿ ಮತ್ತು ಪ್ರಭುಶಂಕರೇಶ್ವರ ಗಚ್ಚಿನ ಮಠದ ಪೀಠಾಧಪತಿ ಶಂಕರರಾಜೇಂದ್ರ ಸ್ವಾಮೀಜಿ ಜಂಗಮಹೋತ್ಸವದ ಅಡ್ಡ ಪಲ್ಲಕ್ಕಿ ಹಾಗೂ ಕುಂಭಮೇಳ ಜರುಗಿತು.

ಪಟ್ಟಣದ ಪ್ರಭುಶಂಕರೇಶ್ವರ ಗಚ್ಚಿನಮಠದ ಆವರಣದಲ್ಲಿ ಮಹಾತಪಸ್ವಿಗಳ ಕತುೃ ಗದ್ದಿಗೆಗೆ ಮಹಾ ರುದ್ರಾಭಿಷೇಕ, ಸಹಸ್ರ ಬಿಲ್ವಾಚಾರ್ಯ ಮತ್ತು ಶಿವದೀಕ್ಷೆ ಅಯ್ಯಚಾರ ನಡೆಯಿತು.

ಪ್ರಭುಶಂಕರೇಶ್ವರ ಅನುಭವ ಮಂಟಪದಿಂದ ಆರಂಭವಾದ ಮೆರವಣಿಗೆ ಸಂಗಮೇಶ್ವರ ವಿದ್ಯಾವರ್ಧಕ ಸಂಘದ ಮಹಾದ್ವಾರ, ಚಿತ್ತರಗಿ ಕ್ರಾಸ್, ಬಸವೇಶ್ವರ ದೇವಸ್ಥಾನ, ತೇರಿನ ಬಜಾರ, ಮಂಗಳಮ್ಮ ದೇವಸ್ಥಾನ, ನಾಗಪ್ಪನ ಕಟ್ಟಿ, ಗಣೇಶ ದೇವಸ್ಥಾನ, ಬಸ್ ನಿಲ್ದಾಣ, ಸೂಳೆಭಾವಿ ಕ್ರಾಸ್ ಮೂಲಕ ಪ್ರಭು ಶಂಕರೇಶ್ವರ ಅನುಭವ ಮಂಟಪಕ್ಕೆ ಬಂದು ತಲುಪಿತು.

ಕರಳದ ಚಂಡಿವಾದ, ಜಾಂಜ್ ಪಾತಾಕ, ಬಳ್ಳಾರಿಯ ವೀರಗಾಸೆ, ಕರಡಿ ಮಜಲು, ಬಾಜಾ ಭಜಂತ್ರಿ ಸೇರಿ ವಿವಿಧ ವಾದ್ಯಗಳು ಮೆರವಣಿಗೆಗೆ ಸಾಥ್ ನೀಡಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net