ಶ್ರೀದುರ್ಗಾದೇವಿ ಉಡಿ ತುಂಬುವ ಕಾರ್ಯಕ್ರಮ

31ALD05
ಅಳವಂಡಿ ಸಮೀಪದ ಮೋರನಹಳ್ಳಿ ಗ್ರಾಮದ ಶ್ರೀದುರ್ಗಾದೇವಿ ಜಾತ್ರೆ ಅಂಗವಾಗಿ ಹೂಗಳಿಂದ ಅಲಂಕರಿಸಿ ಪೂಜಿಸಲಾಗಿತ್ತು.
Published on

ಅಳವಂಡಿ: ಸಮೀಪದ ಮೋರನಹಳ್ಳಿ ಗ್ರಾಮದ ಶ್ರೀದುರ್ಗಾದೇವಿ ಜಾತ್ರೆ ಅಂಗವಾಗಿ ಉಡಿ ತುಂಬುವ ಹಾಗೂ ಭಂಡಾರ ಒಡೆಯುವ ಕಾರ್ಯಕ್ರಮ ಶುಕ್ರವಾರ ಅದ್ದೂರಿಯಾಗಿ ನಡೆಯಿತು. ಬೆಳಗ್ಗೆ ದೇವಿಗೆ ವಿಶೇಷ ಪೂಜೆ, ಪುನಸ್ಕಾರಗಳನ್ನು ಸಲ್ಲಿಸಲಾಯಿತು ಹಾಗೂ ಉಡಿ ತುಂಬುವ ಕಾರ್ಯ ನಡೆಯಿತು.

ಶ್ರೀ ದುರ್ಗಾದೇವಿಯನ್ನು ಜಾತ್ರೆ ಅಂಗವಾಗಿ ವಿವಿಧ ಹೂಗಳಿಂದ ಅಲಂಕರಿಸಿ ಪೂಜಿಸಲಾಗಿತ್ತು. ಪ್ರಮುಖರಾದ ಯಲ್ಲಪ್ಪ ಮಾಗಳದ, ಹುಲಗಪ್ಪ ಕಲ್ಲಳ್ಳಿ, ದೇವಪ್ಪ ಮಾಗಳದ, ಅಂದಪ್ಪ ಚಿಲಗೋಡ್ರ, ಚಂದ್ರಪ್ಪ, ಹನುಮಂತ, ಸಣ್ಣವೀರಪ್ಪ, ಪರಸಪ್ಪ, ವೆಂಕಟೇಶ, ಶೇಖರಯ್ಯ, ನಾಗಪ್ಪ, ಭರಮಪ್ಪ, ಶಿವಪ್ಪ, ಹನುಮಂತ ಹಾಗೂ ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net