

ವಿಜಯವಾಣಿ ಸುದ್ದಿಜಾಲ ಧಾರವಾಡ
ದ್ವಿತೀಯ ಪಿಯುಸಿಯಲ್ಲಿ ಕರ್ನಾಟಕ ಕಲಾ ಕಾಲೇಜಿನ ಕಲಾ, ವಾಣಿಜ್ಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಕಲಾ ವಿಭಾಗದಲ್ಲಿ ಶ್ರೀದೇವಿ ಅಮ್ಮನ್ನವರ 577 ಅಂಕ ಪಡೆದು ಪ್ರಥಮ, ಗ್ರೀಶ್ಮಾ ಗಲಗಲಿ 573 ಅಂಕ ದ್ವಿತೀಯ, ನೇಹಾ ಹಿರಮಠ 571 ಅಂಕ ಗಳಿಸಿ ತೃತೀಯ ಸ್ಥಾನ ಪಡೆದಿದ್ದಾಳೆ. ನಾಗರಾಜ 570, ಗೀತಾ 570, ಆದರ್ಶ ಪೂಜಾರ 565, ಮೀನಾಕ್ಷಿ ಸಂಕೀನ್ 563, ಶಿವರಾಜ ಮುಳಗುಂದ 562, ಲಕ್ಕಪ್ಪ ಹುಣಿಶ್ಯಾಳ್ 562, ಯಮನವ್ವ ಮುಶೆಲ್ಲಪ್ಪಗೋಳ 561, ಅಮೃತಾ ಹಳ್ಳಿಬೈಲ 557, ಯಶೋಧಾ ಹೊಸಮನಿ 556 ಅಂಕ ಪಡೆದಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಸೌಜನ್ಯಾ ಕುಲಕರ್ಣಿ 591 ಅಂಕ ಪಡೆದು ಪ್ರಥಮ, ಹರ್ಷಾ ಕಲಬುರಗಿ 560 ದ್ವಿತೀಯ, ರೇಖಾ ಬುಸರಡ್ಡಿ 554 ಅಂಕ ಗಳಿಸಿ ತೃತೀಯ ಸ್ಥಾನ ಪಡೆದಿದ್ದಾಳೆ. ಹೇಮಾ ಗಡನ್ನವರ 546, ಸೋನಾಲಿ ದೇಸಾಯಿ 545, ರಸಿಕಾ ದಡ್ಡಿಕರ 544, ಪ್ರೀತಿ ಕವಲೂರ 540, ಸೃಷ್ಟಿ ಯು. 532, ಪ್ರಕಾಶ ಕೆ. 511, ಸುಕೃತ ಪಾಟೀಲ 503 ಅಂಕ ಪಡೆದಿದ್ದಾರೆ. ಸಾಧಕ ವಿದ್ಯಾರ್ಥಿಗಳನ್ನು ಕರ್ನಾಟಕ ಕಲಾ ಕಾಲೇಜಿನ ಪ್ರಾಚಾರ್ಯ ಡಾ. ಡಿ.ಬಿ. ಕರಡೋಣಿ, ಶೈಕ್ಷಣಿಕ ಡೀನ್ ಡಾ. ಮುಕುಂದ ಲಮಾಣಿ, ಕಾಲೇಜಿನ ಐಕ್ಯೂಎಸಿ ವಿಭಾಗದ ಸಂಯೋಜಕ ಡಾ. ಐ.ಸಿ. ಮುಳಗುಂದ ಅಭಿನಂದಿಸಿದ್ದಾರೆ.