

ಬ್ಯಾಕೋಡು: ಸಾಗರ ತಾಲೂಕಿನ ತುಮರಿ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷ-ಉಪಾಧ್ಯಕ್ಷರಾಗಿ ಸೋಮವಾರ ಶ್ರೀದೇವಿ ರಾಮಚಂದ್ರ ಮತ್ತು ಪ್ರೇಮಾ ಸಂತೋಷ್ ಆಯ್ಕೆಯಾದರು. 11 ಸದಸ್ಯ ಬಲದ ಗ್ರಾಪಂನಲ್ಲಿ ಅಧ್ಯಕ್ಷ ಸ್ಥಾನಕ್ಕೆ ಶ್ರೀದೇವಿ ರಾಮಚಂದ್ರ, ರಾಧಾ ರಘುವತಿ, ಮಂಜುಳಾ ಶ್ರೀನಿವಾಸ್ ನಾಮಪತ್ರ ಸಲ್ಲಿಸಿದ್ದು ರಾಧಾ ರಘುಪತಿ ವಾಪಸ್ ಪಡೆದರು. ಚುನಾವಣೆಯಲ್ಲಿ ಶ್ರೀದೇವಿಗೆ 6, ಮಂಜುಳಾಗೆ 5 ಮತ ದೊರೆತವು. ಉಪಾಧ್ಯಕ್ಷ ಸ್ಥಾನಕ್ಕೆ ಪ್ರೇಮಾ ಸಂತೋಷ್, ಕೆ.ಆರ್.ಶ್ರೀಧರಮೂರ್ತಿ ನಾಮಪತ್ರ ಸಲ್ಲಿಸಿದ್ದು ಪ್ರೇಮಾಗೆ 7, ಶ್ರೀಧರಮೂರ್ತಿಗೆ 4 ಮತ ಬಿದ್ದವು. ಚುನಾವಣಾಧಿಕಾರಿಯಾಗಿ ಸಂತೋಷಕುಮಾರ್ ಕಾರ್ಯನಿರ್ವಹಿಸಿದರು. ಪಿಡಿಒ ಭೋಗರಾಜು ಹಾಗೂ ಸದಸ್ಯರು ಇದ್ದರು.