ಶ್ರೀಚನ್ನಕೇಶವಸ್ವಾಮಿ ದೇಗುಲ ಶಿಲ್ಪಕಲೆ ವೀಕ್ಷಣೆ

9blrp2
Published on

ಬೇಲೂರು : ಯುನೆಸ್ಕೊ ನಿರ್ದೇಶಕ ಡಾ.ಲೆಜಾರೆ ಲೆಲೊಂಡೊ ಅಸೊಮೋ ಮತ್ತು ಉಪ ನಿರ್ದೇಶಕಿ ಡಾ.ಜ್ಯೋತಿ ವಸಾಗ್ರಹಾರ್ ನೇತೃತ್ವದ ತಂಡ ಶುಕ್ರವಾರ ಬೇಲೂರಿನ ಶ್ರೀಚನ್ನಕೇಶವಸ್ವಾಮಿ ದೇಗುಲಕ್ಕೆ ಭೇಟಿ ನೀಡಿ ಶಿಲ್ಪಕಲೆ ವೀಕ್ಷಿಸಿದ್ದಲ್ಲದೆ, ದೇಗುಲದ ಬಗ್ಗೆ ಸಂಪೂರ್ಣ ಮಾಹಿತಿ ಪಡೆದರು.


  • ದೇಗುಲ ವೀಕ್ಷಿಸಿದ ನಂತರ ಯುನೆಸ್ಕೊ ನಿರ್ದೇಶಕ ಡಾ.ಲೆಜಾರೆ ಲೆಲೊಂಡೊ ಅಸೊಮೋ ದೇಗುಲ ವೀಕ್ಷಣೆಗೆ ಪ್ರತಿನಿತ್ಯ ಎಷ್ಟು ಪ್ರವಸಿಗರು ಬರುತ್ತಾರೆ ಎಂಬ ಮಾಹಿತಿ ಪಡೆದು, ದೇಗುಲ ಹಾಗೂ ದೇಗುಲದ ಗೋಪುರ ಮತ್ತು ಪಕ್ಕದಲ್ಲಿರುವ ಕಲ್ಯಾಣಿಯ ಅಭಿವೃದ್ಧಿ ಸೇರಿದಂತೆ ಇತರ ವ್ಯವಸ್ಥೆಗಳನ್ನು ಮಾಡುವುದಕ್ಕೆ ಮುಂದಾಗಾಬೇಕಾಗಿದೆ. ಈ ಬಗ್ಗೆ ಸಂಪೂರ್ಣ ವರದಿ ನೀಡುವುದಕ್ಕಾಗಿ ಬಂದಿದ್ದು ಯುನೆಸ್ಕೊಗೆ ಮಾಹಿತಿ ನೀಡುವುದಾಗಿ ತಿಳಿಸಿದರು.

  • ಯುನೆಸ್ಕೊ ಉಪ ನಿರ್ದೇಶಕಿ ಡಾ.ಜ್ಯೋತಿ ಹೊಸಾಗ್ರಹಾರ ಮಾತನಾಡಿ, ವಿಶ್ವಮಾನ್ಯತೆ ಪಟ್ಟಿಯ 46ನೇ ಅಧಿವೇಶನದಲ್ಲಿ ಪಾಲ್ಗೊಳ್ಳಲು ಇಲ್ಲಿಗೆ ಆಗಮಿಸಿದ್ದು, ಬೇಲೂರು-ಹಳೆಬೀಡು ದೇಗುಲಗಳು ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿರುವುದರಿಂದ ಸ್ಥಳೀಯ ಅಧಿಕಾರಿಗಳೊಂದಿಗೆ ದೇಗುಲಗಳು ಹಾಗೂ ದೇವಾಲಯದ ಅಕ್ಕಪಕ್ಕದಲ್ಲಿ ಹೇಗೆ ಅಭಿವೃದ್ಧಿ ಪಡಿಸಬೇಕೆಂಬ ಮಾಹಿತಿ ಸಿದ್ಧಪಡಿಸಲಾಗಿದ್ದು, ಅದನ್ನು ಪರಿಶೀಲಿಸಲು ಇಲ್ಲಿಗೆ ಬಂದಿದ್ದೇವೆ. ಇದೊಂದು ವಿಶಿಷ್ಟವಾದ ಕಲಾಕೃತಿ ಹೊಂದಿರುವ ಅದ್ಭುತ ದೇವಾಲಯ. ಇದನ್ನು ಮುಂದಿನ ಪೀಳಿಗೆಗೆ ಸಂರಕ್ಷಿಸುವುದು ನಮ್ಮೆಲ್ಲರ ಹೊಣೆ ಎಂದರು.

    • ದೇವಾಲಯ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಬಗ್ಗೆ ನಿರ್ದೇಶಕರಿಗೆ ತಹಸೀಲ್ದಾರ್ ಎಂ.ಮಮತಾ ಹಾಗೂ ದೇಗುಲ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ನಾರಾಯಣಸ್ವಾಮಿ ಮಾಹಿತಿ ನೀಡಿದರು.
    • ಪುರಾತತ್ವ ಇಲಾಖೆಯ ಗೌತಮ್, ನಾಗರಾಜ್, ಜ್ಞಾನೇಶ್, ಚನ್ನಕೆಶವಸ್ವಾಮಿ ದೇಗುಲ ಇಒ ಯೊಗೇಶ್, ತಾಪಂ ಇಒ ಸತೀಶ್, ಪೊಲೀಸ್ ಇನ್ಸ್‌ಪೆಕ್ಟರ್ ಸುಬ್ರಹ್ಮಣ್ಯ, ಪಿಎಸ್‌ಐ ಪ್ರವೀಣ್ ಕುಮಾರ್ ಅಸೇರಿದಂತೆ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net