ಶ್ರೀ ಯೋಗೀಶ್ವರ ಯಾಜ್ಞವಲ್ಕ್ಯ ಮಹರ್ಷಿಗಳ ಜಯಂತಿ ನಾಳೆಯಿಂದ

WEB LOGO
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಮದಿಹಾಳದ ಶ್ರೀ ಯಾಜ್ಞವಲ್ಕ್ಯ ಸೇವಾ ಸಂಘದ ವತಿಯಿಂದ ಮದಿಹಾಳದ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿ ಜೂ. 4, 5ರಂದು ಶ್ರೀ ಯೋಗೀಶ್ವರ ಯಾಜ್ಞವಲ್ಕ್ಯಮಹರ್ಷಿಗಳ ಜಯಂತಿ ಉತ್ಸವ ಏರ್ಪಡಿಸಲಾಗಿದೆ.

ಜೂ. 4ರಂದು ಬೆಳಗ್ಗೆ 9 ಗಂಟೆಗೆ ಚಿದಂಬರ ಸ್ವಾಮಿಗೆ ರುದ್ರಾಭಿಷೇಕ, ನಂತರ ಶ್ರೀ ಪ್ರಸನ್ನ ದೀಕ್ಷಿತ ಉತ್ಸವಕ್ಕೆ ಚಾಲನೆ ನೀಡುವರು. ಬೆಳಗ್ಗೆ 10.30ಕ್ಕೆ ಆನಂದಕಂದ ಬಳಗದಿಂದ ಸಂಗೀತ ಸೇವೆ, 11.30ಕ್ಕೆ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಶ್ರೀ ಯೋಗೀಶ್ವರ ಯಾಜ್ಞವಲ್ಕ್ಯ ಭಾಷಣ ಸ್ಪರ್ಧೆ, ಎಸ್ಸೆಸ್ಸೆಲ್ಸಿ ಹಾಗೂ ದ್ವೀತಿಯ ಪಿಯು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಏರ್ಪಡಿಸಲಾಗಿದೆ.

ಜೂ. 5ರಂದು ಬೆಳಗ್ಗೆ 8 ಗಂಟೆಗೆ ಶ್ರೀ ಯೋಗೀಶ್ವರ ಯಾಜ್ಞವಲ್ಕ್ಯ ಮಹರ್ಷಿಗಳಿಗೆ ವಿಶೇಷ ಪೂಜೆ, ಅಷ್ಟೋತ್ತರ, ಅಲಂಕಾರ, ಬೆಳಗ್ಗೆ 10.15ಕ್ಕೆ ತೊಟ್ಟಿಲೋತ್ಸವ, 11 ಗಂಟೆಗೆ ಶಶಿಕಾಂತ ಕರಣಮ್ ಅವರಿಂದ ಪ್ರವಚನ, 11.30ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಶ್ರೀ ದಂಡಪಾಣಿ ದೀಕ್ಷಿತ ಹಾಗೂ ಶ್ರೀ ಪ್ರಸನ್ನ ದೀಕ್ಷಿತ ಸಾನ್ನಿಧ್ಯ ವಹಿಸುವರು. ಲಕ್ಷ್ಮಣ ಕುಲಕರ್ಣಿ ಅತಿಥಿಯಾಗಿ ಆಗಮಿಸುವರು. ಪ್ರಕಾಶ ಕುಲಕರ್ಣಿ ಅಧ್ಯಕ್ಷತೆ ವಹಿಸುವರು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net