

ಕುಂದಗೋಳ: ದಕ್ಷಿಣದ ಸವದತ್ತಿ ಎಂದೇ ಪ್ರಖ್ಯಾತಿ ಪಡೆದಿರುವ ತಾಲೂಕಿನ ಸುಕ್ಷೇತ್ರ ಚಾಕಲಬ್ಬಿ ಗ್ರಾಮದಲ್ಲಿ ಶ್ರೀ ಯಲ್ಲಮ್ಮದೇವಿ ಜಾತ್ರಾ ಮಹೋತ್ಸವ (ಕರಿ ಬಂಡಿ ಉತ್ಸವ) ಏ. 17ರಿಂದ 19ರವರೆಗೆ ವಿಜೃಂಭಣೆಯಿಂದ ಜರುಗಲಿದೆ.
\ಏ. 17ರಂದು ಕರಿಬಂಡಿ ಪೂಜೆ ಹಾಗೂ 18 ರಂದು ಕರಿಬಂಡಿ ಜಾತ್ರೆ ನಡೆಯಲಿದೆ. ಪಟ್ಟಣ ಹಾಗೂ ಸುತ್ತಲಿನ ಗ್ರಾಮಗಳಿಂದ ಜಾತ್ರೆಗೆ ಆಗಮಿಸುವ ಭಕ್ತಾದಿಗಳಿಗೆ ಹುಬ್ಬಳ್ಳಿ-ಕುಂದಗೋಳ- ಸಂಶಿ ಹಾಗೂ ಹುಬ್ಬಳ್ಳಿ- ನಲವಡಿ ಮಾರ್ಗವಾಗಿ ಸಾರಿಗೆ ಮತ್ತು ಖಾಸಗಿ ವಾಹನಗಳ ವ್ಯವಸ್ಥೆ ಇರಲಿದೆ ಎಂದು ಶ್ರೀ ಯಲ್ಲಮ್ಮದೇವಿ ದೇವಸ್ಥಾನದ ಅಭಿವೃದ್ಧಿ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.