ದೇವರ ನಾಮ ಸ್ಮರಣೆಯಿಂದ ಯಶಸ್ಸು

Karatagi Pejavara shri padayatra
ಕಾರಟಗಿಯಲ್ಲಿ ಲಕ್ಷ್ಮೇಶ್ವರದ ಮಂತ್ರಾಲಯ ಪಾದಯಾತ್ರಿಗಳೊಂದಿಗೆ ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಶ್ರೀಕೃಷ್ಣನ ವಿಶೇಷ ಪೂಜೆಗೆ ಪಟ್ಟಣದ ರಾಘವೇಂದ್ರ ಮಠದಿಂದ ಪಾದಯಾತ್ರೆ ಮೂಲಕ ಆಗಮಿಸಿದರು.
Published on

ಕಾರಟಗಿ: ದೇವರಿಗೆ ಸಮರ್ಪಿಸುವ ಪೂಜೆಯಲ್ಲಿ ಭಕ್ತಿ ಇರಬೇಕು ಎಂದು ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

ಪಟ್ಟಣದ ಲಕ್ಷೆ ್ಮೀಶ್ವರದ ಶ್ರೀ ಕ್ಷೇತ್ರ ಮಂತ್ರಾಲಯ ಸಂಘದಿಂದ ನಡೆಯುತ್ತಿರುವ 67ನೇ ವರ್ಷದ ಮಂತ್ರಾಲಯ ಪಾದಯಾತ್ರಿಗಳಿಗೆ ಚಿನಿವಾಲ ಕುಟುಂಬದಿಂದ ಭಾನುವಾರ ಆಯೋಜಿಸಿದ್ದ ಪೂಜಾ ಕಾರ್ಯಕ್ರಮದಲ್ಲಿ ಅಷ್ಟೋತ್ತರ, ವಿಶೇಷ ಪೂಜೆ ಹಾಗೂ ತೊಟ್ಟಿಲು ಸೇವೆ ನೆರವೇರಿಸಿ ಮಾತನಾಡಿದರು.

ದೇವರ ನಾಮ ಸ್ಮರಣೆಯಿಂದ ದುಃಖಗಳಿಂದ ದೂರವಾಗಬಹುದು. ಯಶಸ್ಸು, ಕೀರ್ತಿ ಪಡೆಯಲು ಪ್ರಯತ್ನದ ಜತೆ ದೇವರ ಅನುಗ್ರಹವೂ ಮುಖ್ಯ. ಸಮಾಜಕ್ಕೆ ಉತ್ತಮ ಕಾರ್ಯ ಮಾಡಲು ಪ್ರೇರಣೆ ಮತ್ತು ಶುದ್ಧ ಮನಸ್ಸಿನಿಂದ ಕಾರ್ಯನಿರ್ವಹಿಸುವಂತೆ ಪ್ರೋತ್ಸಾಹಿಸಲು ಭಗವಂತನ ಆಶೀರ್ವಾದವು ಬೇಕು. ಹರಿಯುವ ನೀರಿನ ಮೇಲೆ ತೇಲುವ ಒಣ ಎಲೆಯ ಮೇಲೆ ಹಕ್ಕಿ ಕುಳಿತರೂ ಮುಳುಗಿ ಹೋಗುತ್ತದೆ. ಆದರೆ, ದೋಣಿ ತನ್ನ ಮೇಲೆ ಹತ್ತಾರು ಜನರನ್ನು ಹೊತ್ತು ದಡ ಸೇರಿಸುತ್ತದೆ. ಹೀಗೆ ಜೀವನವೂ ದೋಣಿಯಂತಾದಾಗ ಸಾರ್ಥಕವಾಗಲಿದೆ. ಅಂಥ ಮಾನವ ಜನ್ಮ ದೊಡ್ಡ ಒಳಿತಿಗೆ ವಿನಿಯೋಗವಾಗುವಂತೆ ನೋಡಿಕೊಳ್ಳಿ ಎಂದರು.

ಪ್ರಮುಖರಾದ ವೀರೇಶಪ್ಪ ಚಿನಿವಾಲ, ರಾಧಾಕೃಷ್ಣ ಕುಲಕರ್ಣಿ, ಶ್ರೀಕೃಷ್ಣ ಕುಲಕರ್ಣಿ, ಕಾಂತೇಶ ಆಚಾರ್ ಗಣಾಚಾರಿ, ಪ್ರಾಣೇಶಾಚಾರ್ ಅವಧಾನಿ, ಪ್ರಕಾಶ ಪಾಟೀಲ್, ಗುರುರಾಜ ಕುಲಕರ್ಣಿ, ಪಿ.ಎಸ್.ಶಶಿಕುಮಾರ್, ಅನಿಲ ಕುಲಕರ್ಣಿ, ಶ್ರೀನಿವಾಸ ಕಾರಕೂನ, ಕೆ.ಸಣ್ಣಸೂಗಪ್ಪ, ಕೆ.ನಾಗಪ್ಪ, ಅಮರೇಶಪ್ಪ ಸಾಲಗುಂದಿ, ಶರಣಪ್ಪ ಹುರಕಡ್ಲಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net