ಶ್ರೀ ವಿದ್ಯೇಶತೀರ್ಥರು ಜು. 5ರಂದು ಹುಬ್ಬಳ್ಳಿಗೆ

vidyeshtirtharu
Published on

ಹುಬ್ಬಳ್ಳಿ: ಉಡುಪಿಯ ಭಂಡಾರಕೇರಿಯ ಶ್ರೀ ವಿದ್ಯೇಶತೀರ್ಥರು ಜು. 5ರಂದು ಹುಬ್ಬಳ್ಳಿಗೆ ಆಗಮಿಸಲಿದ್ದು ಎರಡು ದಿನಗಳ ಕಾಲ ದೇಶಪಾಂಡೆ ನಗರದ ಶ್ರೀ ಕೃಷ್ಣ ದೇವಸ್ಥಾನದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಶ್ರೀ ಕೃಷ್ಣದೇವರಿಗೆ 5ರಂದು ವಿಶೇಷ ಎಳೆನೀರು ಅಭಿಷೇಕ ನಡೆಯಲಿದೆ. 6ರಂದು ಆಷಾಢ ಏಕಾದಶಿ ನಿಮಿತ್ತ ಬೆಳಗ್ಗೆ 8.30ಕ್ಕೆ ಶ್ರೀ ವಿದ್ಯೇಶತೀರ್ಥರು ತಪ್ತಮುದ್ರಾಧಾರಣ ಮಾಡಲಿದ್ದಾರೆ. ಚಾತುರ್ವಸ್ಯಾರಂಭ ಕಾಲದಲ್ಲಿ ಭಗವದ್ ಶ್ರವಣಕ್ಕಾಗಿ ಸಂಜೆ 6.30ಕ್ಕೆ ಶ್ರೀಗಳು ಶ್ರೀ ಮದ್ಭಾಗವತ ಪ್ರವಚನ ನೀಡುವರು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಬೇಕು ಎಂದು ದಕ್ಷಿಣ ಕನ್ನಡ ದ್ರಾವಿಡ ಬ್ರಾಹ್ಮಣ ಸಮಾಜದ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net