

ಮೈಸೂರು: ನಗರದ ಹೊರವಲಯದ ಚಿಕ್ಕಹಳ್ಳಿಯ ವಿಶ್ವಕರ್ಮ ಜಗದ್ಗುರು ಪೀಠ ಅರೇಮಾದನಹಳ್ಳಿ ವಿಶ್ವಬ್ರಾಹ್ಮಣ ಮಹಾಸಂಸ್ಥಾನ ಮಠದ ಮೈಸೂರು ಶಾಖಾ ಮಠದಲ್ಲಿ ಶ್ರೀ ವಿಭೂಷಿತ ಶಿವಸುಜ್ಞಾನತೀರ್ಥ ಸ್ವಾಮೀಜಿ ಕೈಗೊಂಡಿರುವ ಚಾತುರ್ಮಾಸ್ಯ ವ್ರತ ಗುರುವಾರದಿಂದ ಪ್ರಾರಂಭಗೊಂಡಿತು. ಚಾತುರ್ಮಾಸ್ಯ ವ್ರತವು ಸೆ.7ರವರೆಗೆ ನಡೆಯಲಿದೆ.
ಗುರುಗಳು ಬೆಳಗ್ಗೆ ಮಠದಲ್ಲಿ ಚಾತುರ್ಮಾಸ್ಯ ವ್ರತ ಸಂಕಲ್ಪ ಮಾಡಿ ಶ್ರೀ ಕೃಷ್ಣ ಪಂಚಕ, ಶ್ರೀ ವ್ಯಾಸ ಪಂಚಕ, ಶ್ರೀ ಶಂಕರ ಪಂಚಕಗಳೊಂ ದಿಗೆ ಗುರುಪರಂಪರಾ ಪೂಜೆಗಳನ್ನು ನೆರವೇರಿಸಿ ನಂತರ ಆಶೀರ್ವಚನ ನೀಡಿದರು.
ಈ ಸಂದರ್ಭ ರಾಜ್ಯ ವಿಶ್ವಕರ್ಮ ಸಮಾಜದ ಅಧ್ಯಕ್ಷ ಈಶ್ವರಾಚಾರ್, ಕಾರ್ಯಾಧ್ಯಕ್ಷ ಬಾಬುಪತ್ತಾರ್, ಜಿಲ್ಲಾ ವಿಶ್ವಕರ್ಮ ಮಹಾ ಒಕ್ಕೂಟದ ಅಧ್ಯಕ್ಷ ಹುಚ್ಚಪ್ಪಾಚಾರ್, ವಿಶ್ವಕರ್ಮ ವಿದ್ಯಾರ್ಥಿ ನಿಲಯ ಅಧ್ಯಕ್ಷ ಎ.ಎನ್. ಸ್ವಾಮಿ, ವಿಶ್ವಕರ್ಮ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಡಾ.ಬಿ.ಎಂ. ಉಮೇಶ್ ಕುಮಾರ್, ಚಿಕ್ಕಹಳ್ಳಿಯ ಎಜೆಎಸ್‌ಪಿ ಟ್ರಸ್ಟ್ ಕಾರ್ಯಾಧ್ಯಕ್ಷ ಎಂ.ಸಿ. ಮರಿಸ್ವಾಮಿ, ಉಪಾಧ್ಯಕ್ಷ ಸಿ.ವಿ. ಈಶ್ವರಾಚಾರ್, ಸದಸ್ಯರಾದ ಬಸವರಾಜು, ಬಿ.ಸಿ. ನಾಗರಾಜು ಹಾಗೂ ಇತರರು ಇದ್ದರು.