ಬ್ರಹ್ಮರಥೋತ್ಸವ

Sudhee_18_Brahma_Rathotsava_@_Gali_Anjaneya_Temple (6)
Published on

ಬೆಂಗಳೂರು : ಮೈಸೂರು ರಸ್ತೆಯ ಗಾಳಿ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಗುರುವಾರ ಶ್ರೀ ವೇಣುಗೋಪಾಲ ಕೃಷ್ಣ ಸ್ವಾಮಿ ಬ್ರಹ್ಮರಥೋತ್ಸವ ವೈಭವಯುತವಾಗಿ ಜರುಗಿತು. ಬೆಳಗ್ಗೆ ದೇವರಿಗೆ ಅಭಿಷೇಕ, ಮಂಟಪೋತ್ಸವ, ಮಹಾಮಂಗಳಾರತಿ ನಡೆಯಿತು. ಮಧ್ಯಾಹ್ನ ಮಂಗಳವಾದ್ಯ ಸಹಿತ ದೇವಳದ ಆವರಣದಿಂದ ಹೊರಟ ಬ್ರಹ್ಮರಥೋತ್ಸವ ಮೈಸೂರು ರಸ್ತೆಯಲ್ಲಿ ಸುಮಾರು ಒಂದು ಕಿ.ಮೀ.ನಷ್ಟು ಸಾಗಿತು. ಇದೇ ವೇಳೆ ಶ್ರೀ ಆದಿಶಕ್ತಿ ಪ್ಲೇಗ್ ಮಾರಮ್ಮ ದೇವಿ ರಥೋತ್ಸವವೂ ಜರುಗಿತು. ಸಂಜೆ ರಥಾವರೋಹಣವಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net