

ತಾಳಿಕೋಟೆ: ಸ್ಥಳಿಯ ಮಾರ್ವಾಡಿ ಸಮಾಜದಿಂದ ಶ್ರೀ ವೆಂಕಟೇಶ್ವರ ಬ್ರಹ್ಮೋತ್ಸವ ಕಾರ್ಯಕ್ರಮ ಮಂಗಳವಾರ ಭಕ್ತಿಭಾವದಿಂದ ನಡೆಯಿತು.
ಶ್ರೀ ಬಾಲಾಜಿ ಮಂದಿರದಲ್ಲಿ ನಡೆದ ಈ ಉತ್ಸವದಲ್ಲಿ ಪೂಜಾವಿಧಿ ವಿಧಾನಗಳನ್ನು ಹೈದರಾಬಾದ ವೇ. ದಾಸ್ ಶ್ರೀಧರಾಚಾರ್ಯರು ಹಾಗೂ ಅವರ ಸಂಗಡಿಗರು ನಡೆಸಿಕೊಟ್ಟರು.
ಅಂಕುರಾರ್ಪಣೆ, ಬ್ರಾಹ್ಮಣವರ್ಣ, ಪುಣ್ಯಾರ್ಚನೆ, ಚಂಗಮ ಹವನ, ಗರುಡ ಬೋಜನ, ರಾಗ ತಾಳ ಮಂತ್ರದೊಂದಿಗೆ ಈ ಪೂಜಾ ಕಾರ್ಯಕ್ರಮ ನಡೆಯಿತು. ಶ್ರೀ ವೆಂಕಟೇಶ್ವರ ಮೂಲಮೂರ್ತಿ, ಉತ್ಸವಮೂರ್ತಿಗೆ ಪಂಚಾಮೃತ ಅಭಿಷೇಕ ಬಿಲ್ವಾರ್ಚನೆ, ಪುಷ್ಪಾರ್ಚನೆ, ಮಹಾಮಂಗಳಾರಗಿ ಕಾರ್ಯಕ್ರಮಗಳು ನಡೆದವು.
ಶ್ರೀ ವೆಂಕಟೇಶ್ವರ ಬ್ರಹೋತ್ಸವ ಆಚರಣೆ ಕುರಿತು ವಿವರಣೆ ನೀಡಿದ ವೇ. ದಾಸ್. ಶ್ರೀ ದಾರಾಚಾರ್ಯರು ಮಾತನಾಡಿ, ಲೋಕಕಲ್ಯಾಣಾರ್ಥವಾಗಿ ಹೋಮ ಹವನ ಹಾಗೂ ಕುಂಭ ಸ್ಥಾಪನೆ ಮಾಡಲಾಗುತ್ತದೆ.
ಎಲ್ಲ ಭಕ್ತರಿಗೂ ಸನಾತನ ಧರ್ಮ ಪದ್ಧತಿಯಂತೆ ಅನ್ನಪ್ರಸಾದ ಮಾಡುವ ಪರಿಪಾಠದಂತೆ ಮಾಡಲಾಗುತ್ತದೆ ಎಂದರು.
ಭಕ್ತರಿಗೆ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಹೈದರಾಬಾದದ ಚಕನ್ಯಾರ್ಚಾ, ಅಮರಕೃಷ್ಣಮಾಚಾರ್ಯ, ವಿಜಯಕೃಷ್ಣಮಾಚಾರ್ಯ ಹಾಗೂ ಮಾರ್ವಾಡಿ ಸಮಾಜದ ಅಧ್ಯ ಡಾ. ಪಿ.ಎಸ್. ಅಗರವಾಲ, ಸುಭಾಸ ಅಗರವಾಲ, ಶ್ರೀರಂಗ ಅಗರವಾಲ, ಓಂ ಪ್ರಕಾಶ ತಿವಾರಿ, ಮಹಾವೀರ ಅಗರವಾಲ, ರಾಮಸ್ವರೂಪ ಅಗರವಾಲ, ವಿಕ್ರಂ ಅಗರವಾಲ, ಪ್ರದಿಪ ಅಗರವಾಲ, ಶ್ರವಣ ಅಗರವಾಲ, ಮನೋಜ ಗುಪ್ತಾ, ಮಹೇಂದ್ರ ಅಗರವಾಲ, ನರೇಂದ್ರ ಅಗರವಾಲ ಇತರರಿದ್ದರು.
ಚಿತ್ರ ವಿವರಣೆ : ತಾಳಿಕೋಟೆ : ತಾಳಿಕೋಟೆಯಲ್ಲಿ ಜರುಗಿದ ಶೀ ವೆಂಕಟೇಶ್ವರ ಬ್ರಹ್ಮೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೋಂಡ ಶೀಗಳು ಹಾಗೂ ಮಾರ್ವಾಡಿ ಸಮಾಜ ಬಾಂಧವರ ಛಾಯಾಚಿತ್ರ.