

ಶಿರಸಿ: ನಗರದ ರಾಯರಪೇಟೆಯ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಪುಷ್ಯ ಶುದ್ಧ ಏಕಾದಶಿ ದಿನವಾದ ಜ. 10ರಂದು ವೈಕುಂಠ ಏಕಾದಶಿಯ ಪ್ರಯುಕ್ತ ಮುಂಜಾನೆ 4.30ಕ್ಕೆ ವೈಕುಂಠ ದ್ವಾರ ಪೂಜೆ ಹಾಗೂ ವಿಶೇಷ ದೀಪಾಲಂಕಾರದಲ್ಲಿ ದೇವರ ವಿಶ್ವರೂಪ ದರ್ಶನ ಏರ್ಪಡಿಸಲಾಗಿದೆ.
ನಂತರ ಇಡೀ ದಿನ ದೇವರ ದರ್ಶನವಿದ್ದು ಮಧ್ಯಾಹ್ನ 2 ರಿಂದ 3.30ರವರೆಗೆ ಮಾತ್ರ ವಿಶ್ರಾಂತಿ ಇದೆ. ಸಂಜೆ 6.30ರಿಂದ ಸಹಸ್ರಾಧಿಕ ನಂದಾದೀಪಗಳನ್ನು ಬೆಳಗಿಸಿದ ದೀಪೋತ್ಸವದಲ್ಲಿ ದೇವರ ವಿಶೇಷ ದರ್ಶನವಿದೆ. ರಾತ್ರಿ 9.30ಕ್ಕೆ ಮಹಾ ಮಂಗಳಾರತಿ ಮತ್ತು ಪ್ರಸಾದ ವಿತರಣೆ ನಡೆಯಲಿದೆ ಎಂದು ದೇವಸ್ಥಾನದ ಮೊಕ್ತೇಸರ ವಿಷ್ಣುದಾಸ ಕಾಸರಕೋಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.