ವೀರಭದ್ರೇಶ್ವರ ಸ್ವಾಮಿ ಅದ್ದೂರಿ ರಥೋತ್ಸವ

23blrp2
Published on

ಬೇಲೂರು: ತಾಲೂಕಿನ ಮಲೆನಾಡ ಮದ್ಯದ ಕಣದೂರು ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ಸ್ವಾಮಿ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶನಿವಾರ ವಿಜೃಂಭಣೆಯಿಂದ ನಡೆಯಿತು.

ಕಣದೂರು ಶ್ರೀ ವೀರಭದ್ರೇಶ್ವರಸ್ವಾಮಿ ಅವರ ರಥೋತ್ಸವದಲ್ಲಿ ಭಾಗವಹಿಸಿದ್ದ ಸಾವಿರಾರು ಭಕ್ತರು ದೇವರ ದರ್ಶನ ಪಡೆದರು. ಅಲ್ಲದೆ ವಿವಿಧ ಪುಷ್ಪ ಹಾಗೂ ಬಾವುಟ ಮತ್ತು ಬಟ್ಟೆಗಳಿಂದ ರಥವನ್ನು ಸಿಂಗರಿಸಲಾಗಿತ್ತು. ಜತೆಗೆ ರಥಕ್ಕೆ ಗ್ರಾಮಸ್ಥರು ಹಾಕಿದ್ದ ಬೃಹತ್ ಗಾತ್ರದ ಹೂವಿನ ಹಾರಗಳು ನೋಡುಗರ ಕಣ್ಮನ ಸೆಳೆದವು. ಅಕ್ಕಪಕ್ಕದ ಗ್ರಾಮಗಳು ಹಾಗೂ ದೂರ ದೂರುಗಳಿಂದ ಆಗಮಿಸಿದ್ದ ಭಕ್ತರು ರಥ ಎಳೆದು ಕೃತಾರ್ಥರಾದರು. ಎಲ್ಲ ಭಕ್ತರಿಗೂ ಪ್ರಸಾದ ವಿನಿಯೋಗಿಸಲಾಯಿತು. ಮಾಜಿ ಸಚಿವ ಬಿ.ಶಿವರಾಂ, ಹುನುಗನಹಳ್ಳಿ ಗ್ರಾಪಂ ಅಧ್ಯಕ್ಷ ಹರೀಶ್ ನಾಗೇನಹಳ್ಳಿ, ಉಪಾಧ್ಯಕ್ಷೆ ವನಜಾಕ್ಷಿ, ತಾಪಂ ಮಾಜಿ ಉಪಾಧ್ಯಕ್ಷೆ ಪದ್ಮಾಕ್ಷಿ ಸತ್ಯನಾರಾಯಣ್, ದೇಗುಲ ಸಮಿತಿ ಅಧ್ಯಕ್ಷ ಸುರೆಶ್‌ಗೌಡ ಸೇರಿದಂತೆ ಸಮಿತಿ ಸದಸ್ಯರು, ಗ್ರಾಮಸ್ಥರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net