

ಕಂಪ್ಲಿ: ಇಲ್ಲಿನ ಹೊಸಪೇಟೆ ಬೈಪಾಸ್ ರಸ್ತೆಯ ಶ್ರೀ ವೀರಭದ್ರೇಶ್ವರ ಸ್ವಾಮಿಯ 16ನೇ ವಾರ್ಷಿಕೋತ್ಸವ ನಿಮಿತ್ತ ಶುಕ್ರವಾರ ವೀರಭದ್ರೇಶ್ವರ ಸ್ವಾಮಿಗೆ ಮಹಾರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಮಹಾಮಂಗಳಾರತಿ, ಗಂಗೆಸ್ಥಳ, ಗುಗ್ಗಳ, ಅಗ್ನಿಕೊಂಡ ಹಾಯುವುದು ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಕ್ರಿಷ್ಟಯ್ಯ ಅಕ್ಕಿಗಿರಣಿ ಬಳಿಯಿಂದ ಗಂಗೆಸ್ಥಳ ಆರಂಭಗೊಂಡಿತು. ತಾರಾನಗರದ ಆನಂದಸ್ವಾಮಿಯ ಪುರವಂತರ ಕುಣಿತ, ಬುಕ್ಕಸಾಗರದ ನಾಗಪ್ಪನ ಸಮಾಳವಾದನ, ಮನ್ಸೂನ್ ತಾಷಾರಾಂಡೋಲ್ ಸೇರಿ ಕಲಾವಿದರು, ಪೂರ್ಣಕುಂಭ, ಮಹಿಳೆಯರ ಕಳಸದಾರತಿ, ಮಂಗಳವಾದ್ಯ ತಂಡಗಳು ಪಾಲ್ಗೊಂಡಿದ್ದವು.
ವೀರಭದ್ರೇಶ್ವರ ಮೂರ್ತಿಯನ್ನು ಹೂ, ಬಿಲ್ವಪತ್ರೆಗಳಿಂದ ಅಲಂಕರಿಸಲಾಗಿತ್ತು. ಅರ್ಚಕ ಜಿ.ಓಂಕಾರಸ್ವಾಮಿ, ಪ್ರಮುಖರಾದ ಜಿ.ಎಸ್.ಕೊಟ್ರಯ್ಯ, ಕೆ.ಎಂ.ಹೇಮಯ್ಯಸ್ವಾಮಿ, ಮುದ್ದಾಪುರ ರಾಜೇಗೌಡ ಇತರರು ಪಾಲ್ಗೊಂಡಿದ್ದರು.