

ಮುಂಡರಗಿ: ಪಟ್ಟಣದ ಶ್ರೀ ವೀರಭದ್ರೇಶ್ವರ ದೇವಸ್ಥಾನದ 17ನೇ ವಾರ್ಷಿಕೋತ್ಸವ ಅಂಗವಾಗಿ ಡಿ.2 ಮತ್ತು 3ರಂದು ಜಾತ್ರಾ ಮಹೋತ್ಸವ ನಡೆಯಲಿದ್ದು, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಸ್ಥಳೀಯ ಶ್ರೀ ವೀರಭದ್ರೇಶ್ವರ ಸೇವಾ ಸಮಿತಿ ಅಧ್ಯಕ್ಷ ಸಂಗಪ್ಪ ಲಿಂಬಿಕಾಯಿ ಹೇಳಿದರು.
ಪಟ್ಟಣದ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ. 2ರಂದು ಬೆಳಗ್ಗೆ 9 ಗಂಟೆಗೆ ನಾಡೋಜ ಡಾ.ಅನ್ನದಾನೀಶ್ವರ ಶಿವಯೋಗಿಗಳಿಂದ ಶ್ರೀ ಭದ್ರಕಾಳಮ್ಮ ದೇವಿಯ ನೂತನ ಗೋಪುರದ ಕಳಸಾರೋಹಣ ನಡೆಯುವುದು. ನಂತರ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರ ಜರುಗಲಿದೆ. ಸಂಜೆ 4:30ಕ್ಕೆ ಶ್ರೀ ವೀರಭದ್ರೇಶ್ವರ ಪಲ್ಲಕ್ಕಿ ಉತ್ಸವ ಜರುಗುವುದು ಎಂದರು.
ಜಾತ್ರಾ ಕಮಿಟಿ ಅಧ್ಯಕ್ಷ ವೀರೇಶ ಗುಗ್ಗರಿ ಮಾತನಾಡಿ, ಡಿ.3ರಂದು ಬೆಳಗ್ಗೆ 8:30ಕ್ಕೆ ಅಗ್ನಿ ಮಹೋತ್ಸವ ಜರುಗುವುದು. 11:30ಕ್ಕೆ ಉಚಿತ ಸಾಮೂಹಿಕ ವಿವಾಹಗಳು ನಡೆಯಲಿದೆ. ಡಾ.ಅನ್ನದಾನೀಶ್ವರ ಶಿವಯೋಗಿಗಳು ಸಾನ್ನಿಧ್ಯ ವಹಿಸುವರು.
ಲಿಂಗನಾಯಕನಹಳ್ಳಿ ಶ್ರೀ ಚನ್ನವೀರ ಸ್ವಾಮೀಜಿ ನೇತೃತ್ವ ವಹಿಸುವರು. ಮುಷ್ಠಿಕೊಪ್ಪದ ವೈದ್ಯ ಡಾ. ಜಿ.ಬಿ. ಬೀಡನಾಳ ಅವರಿಗೆ ಶ್ರೀ ವೀರಭದ್ರೇಶ್ವರ ಪ್ರತಿಷ್ಠಾನ ಪುರಸ್ಕಾರ ನೀಡಲಾಗುವುದು. ಸಂಗಪ್ಪ ಲಿಂಬಿಕಾಯಿ ಅಧ್ಯಕ್ಷತೆ ವಹಿಸುವರು. ವೀರಭದ್ರೇಶ್ವರ ಮಹಿಳಾ ವೇದಿಕೆ ಅಧ್ಯಕ್ಷೆ ಗೌರಮ್ಮ ಹುರಕಡ್ಲಿ, ಪುರಸಭೆ ಅಧ್ಯಕ್ಷೆ ನಿರ್ಮಲಾ ಕೊರ್ಲಹಳ್ಳಿ, ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ, ಸದಸ್ಯರಾದ ಕವಿತಾ ಉಳ್ಳಾಗಡ್ಡಿ, ಶಾಂತವ್ವ ಕರಡಿಕೊಳ್ಳ ಇತರರು ಪಾಲ್ಗೊಳ್ಳಲಿದ್ದಾರೆ. ಸಾಮೂಹಿಕ ವಿವಾಹದಲ್ಲಿ 45 ನವ ಜೋಡಿಗಳು ನೂತನ ದಾಂಪತ್ಯಕ್ಕೆ ಕಾಲಿಡಲಿದ್ದಾರೆ. ಸಂಜೆ 7 ಗಂಟೆಗೆ ಸಹಸ್ರ ದೀಪೋತ್ಸವ, ಕಾರ್ತಿಕ ಮಂಗಲೋತ್ಸವ ನಡೆಯುವುದು ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಾಯಿಪ್ರಸನ್ನ ಅಳವಂಡಿ, ಅಶೋಕ ಕಮ್ಮಾರ, ಕೊಟ್ರೇಶ ನವಲಿಹಿರೇಮಠ, ಈರಣ್ಣ ಕರ್ಜಗಿ, ವಿ.ಜೆ. ಹಿರೇಮಠ, ಶಿವಯೋಗಿ ಕೊಪ್ಪಳ, ಗೌರಮ್ಮ ಹುರಕಡ್ಲಿ, ಗೀತಾ ಬಣಗಾರ, ರೋಹಿಣಿ ಕುಬಸದ, ಲತಾ ಲಿಂಬಿಕಾಯಿ, ಅಮೃತಾ ಲಿಂಬಿಕಾಯಿ, ಶ್ರೀದೇವಿ ಗೋಡಿ, ಲತಾ ಕಡ್ಡಿ, ಸಂಗೀತಾ ಕೊರಡಕೇರಿ, ನೇತ್ರಾ ಹಾಲಗಿ, ಕಲ್ಪನಾ ಕಡ್ಡಿ, ಪುಷ್ಪಾ ಬೆಲ್ಲದ, ಗುಡದೀರಪ್ಪ ಲಿಂಬಿಕಾಯಿ, ಶರಣಪ್ಪ ಅಂಗಡಿ, ರವೀಂದ್ರಗೌಡ ಪಾಟೀಲ, ಈರಣ್ಣ ಕಾಶಿಗವಿ, ಶರಣಪ್ಪ ಕುಬಸದ, ಇತರರು ಇದ್ದರು.