ಮೇ 24ರಂದು ಶ್ರೀ ವೇದಂ ಆಯು ಆಯುರ್ವೇದ ಆಸ್ಪತ್ರೆ ಲೋಕಾರ್ಪಣೆ

ಯೆಯ್ಯಡಿ ಬಾರೆಬೈಲು ರಸ್ತೆಯಲ್ಲಿ ನಿರ್ಮಾಣಗೊಂಡಿರುವ ನೂತನ ಕಟ್ಟಡ.
ಯೆಯ್ಯಡಿ ಬಾರೆಬೈಲು ರಸ್ತೆಯಲ್ಲಿ ನಿರ್ಮಾಣಗೊಂಡಿರುವ ನೂತನ ಕಟ್ಟಡ.
Published on
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪ್ರವಾಸೋದ್ಯಮ ಇಲಾಖೆಯಿಂದ ಮಾನ್ಯತೆ ಪಡೆದಿರುವ ಮಂಗಳೂರಿನ ಪ್ರಥಮ ಆಯುರ್ವೇದ ಚಿಕಿತ್ಸಾಲಯ ಶ್ರೀ ವೇದಂ ಆಯು ಆಯುರ್ವೇದ ಆಸ್ಪತ್ರೆ ಮತ್ತು ವೆಲ್ ನೆಸ್ ಸೆಂಟರ್ ಇದೀಗ ಯೆಯ್ಯಡಿ ಬಾರೆಬೈಲು ರಸ್ತೆಯಲ್ಲಿರುವ ನೂತನ ಕಟ್ಟಡದಲ್ಲಿ ಮೇ 24ರಂದು ಲೋಕಾರ್ಪಣೆಗೊಳ್ಳಲಿದೆ ಎಂದು ಆಸ್ಪತ್ರೆಯ ಆಡಳಿತ ನಿರ್ದೇಶಕರಾದ ಶ್ರೀದೇವಿ ಕೇಶವರಾಜ್ ಹಾಗೂ ಪ್ರಧಾನ ವೈದ್ಯಕೀಯ ಸಮಾಲೋಚಕ ಡಾ.ಕೇಶವರಾಜ್ ತಿಳಿಸಿದ್ದಾರೆ.
ಶ್ರೀ ವೇದಂ ಆಯು ಆಯುರ್ವೇದ ಸ್ಪೆಶಾಲಿಟಿ ಆಸ್ಪತ್ರೆಯಲ್ಲಿ ಜನಸಾಮಾನ್ಯರ ಎಲ್ಲಾ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಪರಿಣಾಮಕಾರಿಯಾದ ಪರಿಹಾರವು ಲಭ್ಯವಿದೆ. ಹಿರಿಯರ ಅರಿವು ಅನುಭವಗಳಿಂದ ಸಮೃದ್ಧವಾಗಿರುವ ಸಾಂಪ್ರದಾಯಿಕ ಚಿಕಿತ್ಸಾ ಪದ್ಧತಿ ಹಾಗೂ ಆಧುನಿಕ ಚಿಕಿತ್ಸಾ ಕ್ರಮಗಳನ್ನು ಸಂಯೋಜಿಸುವ ಮೂಲಕ ಸಮಕಾಲೀನ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಒದಗಿಸುವುದು ಸಂಸ್ಥೆಯ ಆದ್ಯತೆಯಾಗಿದೆ.
ಮುಂಜಾನೆ 5 ಗಂಟೆಯಿಂದ ರಾತ್ರಿ 10 ಗಂಟೆಯವರೆಗೂ ಚಿಕಿತ್ಸೆ ಒದಗಿಸುವ 20 ಹಾಸಿಗೆಗಳ ಸಾಮರ್ಥ್ಯದ ಈ ಚಿಕಿತ್ಸಾಲಯದಲ್ಲಿ ಪಂಚಕರ್ಮ ಮತ್ತು ಕೇರಳೀಯ ಕರ್ಮಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ನುರಿತ ಸಿಬ್ಬಂದಿ, ವಿಶ್ರಾಂತಿ ಚಿಕಿತ್ಸಾ ಕ್ರಮಗಳು, ಆರೋಗ್ಯ ಮತ್ತು ಸೌಂದರ್ಯ ಸಂಬಂಧಿಯಾದ ವಿವಿಧ ಚಿಕಿತ್ಸಾ ಪ್ಯಾಕೇಜುಗಳು, ಸುಸಜ್ಜಿತ ಔಷಧಾಲಯ ಹಾಗೂ ಯೋಗ ಮತ್ತು ಪ್ರಾಣಾಯಾಮ ತರಗತಿಗಳು ಲಭ್ಯವಿರುತ್ತವೆ. ಆಸ್ಪತ್ರೆಯ ಔಷಧಾಲಯವು ವಾರದ ಎಲ್ಲಾ ದಿನಗಳಲ್ಲಿ ದಿನದ 24 ಗಂಟೆಯೂ ತೆರೆದಿರುತ್ತದೆ.
ಅಭ್ಯಂಗ, ಬಸ್ತಿ, ಶಿರೋಧಾರ, ನೇತ್ರ ತರ್ಪಣ, ಉದ್ವರ್ತನ, ಆಯುರ್ವೇದ ಮಸಾಜ್, ನಾಡಿ ಪರೀಕ್ಷೆ, ಪಂಚಕರ್ಮ, ಕೂದಲು ಮತ್ತು ತಲೆಯ ಆರೈಕೆ, ಚರ್ಮ ಮತ್ತು ಮುಖದ ಆರೈಕೆ, ಸ್ವರ್ಣಪ್ರಾಶನ, ಆಯುರ್ವೇದ ಔಷಧಗಳು, ಹದಿಹರೆಯದವರ ಮತ್ತು ಹಿರಿಯರ ಸಮಸ್ಯೆಗಳಿಗೆ ಚಿಕಿತ್ಸೆ, ಮಂಡಿ ನೋವು, ಬೆನ್ನು ನೋವು ಮತ್ತು ಬೆನ್ನುಹುರಿಯ ಅಸ್ವಸ್ಥತೆಗಳು, ಕೀಲು ನೋವು ಮತ್ತು ಬೊಜ್ಜು, ಬಂಜೆತನ ನಿವಾರಣೆ, ಮಾನಸಿಕ ಅಸ್ವಸ್ಥತೆಗಳು, ಸ್ತ್ರೀರೋಗ ಸಮಸ್ಯೆಗಳು, ಮಧುಮೇಹ, ಅಧಿಕ ರಕ್ತದೊತ್ತಡ- ಹೀಗೆ ಎಲ್ಲಾ ವಯೋಮಾನದವರ, ನಾನಾ ವಿಧದ ಆರೋಗ್ಯ ಸಮಸ್ಯೆಗಳಿಗೆ, ದೀರ್ಘ ಕಾಲೀನ ರೋಗಗಳಿಗೆ ಇಲ್ಲಿ ಸೂಕ್ತ ಚಿಕಿತ್ಸೆ ನೀಡಲಾಗುತ್ತದೆ ಹಾಗೂ ಎಲ್ಲಾ ವಿಧದ ಪಂಚಕರ್ಮ ಚಿಕಿತ್ಸೆಗಳು ಲಭ್ಯವಿರುತ್ತದೆ.
ಆಯುರ್ವೇದ ಚಿಕಿತ್ಸಾ ಪದ್ಧತಿಯಲ್ಲಿ ಸುದೀರ್ಘ ಅನುಭವವನ್ನೂ, ನಾಡಿಪರೀಕ್ಷೆ ಮತ್ತು ಪಂಚಕರ್ಮ ಚಿಕಿತ್ಸೆಯಲ್ಲಿ ವಿಶೇಷ ನೈಪುಣ್ಯವನ್ನೂ ಹೊಂದಿರುವ ಡಾ. ಕೇಶವರಾಜ್ ಅವರು ಆಸ್ಪತ್ರೆಯ ವೈದ್ಯಕೀಯ ಸಮಾಲೋಚಕರಾಗಿದ್ದು, ಅವರ ಚಿಕಿತ್ಸೆಯಲ್ಲಿ ಕಳೆದ 15 ವರ್ಷಗಳಲ್ಲಿ ಸಾವಿರಾರು ರೋಗಿಗಳು ಗುಣಮುಖರಾಗಿದ್ದಾರೆ. ಉಚಿತ ಚಿಕಿತ್ಸಾ ಶಿಬಿರಗಳ ಆಯೋಜನೆಯೇ ಮುಂತಾದ ಸಮಾಜಮುಖೀ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಡಾ.ಕೇಶವರಾಜ್ ಅವರು ಕಡಿಮೆ ಔಷಧಿಯಲ್ಲಿ ಹೆಚ್ಚು ಉತ್ತಮವಾದ ಆರೋಗ್ಯ ಸ್ಥಿತಿಯನ್ನು ಕಾಯ್ದುಕೊಳ್ಳುವ ಸರಳ ಮತ್ತು ನೈಸರ್ಗಿಕ ಚಿಕಿತ್ಸಾ ಕ್ರಮಗಳನ್ನು ಪ್ರಚುರಪಡಿಸುವ ಮೂಲಕ ಜನಮೆಚ್ಚುಗೆ ಗಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net