ಶ್ರೀ ತ್ರಿಶೂಲಿನಿ ದುರ್ಗಾಪರಮೇಶ್ವರಿಯ ವೈಭವದ ರಥೋತ್ಸವ

Sub_Rathotsava
Published on

ಸುಬ್ರಹ್ಮಣ್ಯ: ಬಳ್ಪ ಶ್ರೀ ತ್ರಿಶೂಲಿನಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ದೇವಿಗೆ ವೈಭವದ ಬ್ರಹ್ಮರಥೋತ್ಸವ ಗುರುವಾರ ನೆರವೇರಿತು.

ಗುರುವಾರ ಬೆಳಗ್ಗೆ ಶ್ರೀ ದೇವರ ರಥಾರೋಹಣ ನೆರವೇರಿತು. ಸಂಜೆ ವಿವಿಧ ಕುಣಿತ ಭಜನಾ ತಂಡಗಳಿಂದ ರಥಬೀದಿಯಲ್ಲಿ ಕುಣಿತ ಭಜನಾ ಸೇವೆ ನೆರವೇರಿತು. ಬಳಿಕ ಗಾಯಕ ಜಗದೀಶ್ ಆಚಾರ್ಯ ಪುತ್ತೂರು ಮತ್ತು ಬಳಗದಿಂದ ಸಂಗೀತ ಗಾನ ಸಂಭ್ರಮ ನಡೆಯಿತು. ಧಾರ್ಮಿಕ ಸಭೆ, ರಾತ್ರಿ ಶ್ರೀ ದೇವರ ವೈಭವದ ಬ್ರಹ್ಮರಥೋತ್ಸವ ನೆರವೇರಿತು.ಬಳ್ಪ ಬೆಡಿ ಬಾನಂಗಳದಲ್ಲಿ ಬಣ್ಣದ ಚಿತ್ತಾರ ಮೂಡಿಸಿತು.

ರಥೋತ್ಸವದ ಬಳಿಕ ಉತ್ಸವ ಬಲಿ, ಶ್ರೀ ಭೂತ ಬಲಿ ಉತ್ಸವ, ಕಟ್ಟೆಪೂಜೆ, ಶಯನೋತ್ಸವ ನಡೆಯಿತು. ಶುಕ್ರವಾರ ಬೆಳಗ್ಗೆ ದರ್ಶನ ಬಲಿ, ವಿವಿಧ ವೈದಿಕ ವಿಧಿ-ವಿಧಾನಗಳ ಬಳಿಕ ಮಹಾಪೂಜೆ ಹಾಗೂ ನೆರವೇರಿತು. ಸಂಜೆ ಶ್ರೀ ದೇವರ ಅವಭೃತೋತ್ಸವ ನಡೆಯಿತು. ನಂತರ ಧ್ವಜಾವರೋಹಣದೊಂದಿಗೆ ಜಾತ್ರೆ ಸಂಪನ್ನವಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net