ಶ್ರೀ ತೋಂಟದಾರ್ಯ ಜಾತ್ರಾ ಮಹೋತ್ಸವ ಜ.18ರಿಂದ

Published on

ಶಿರೋಳ: ಗ್ರಾಮದ ತೋಂಟದಾರ್ಯಮಠದ 2025ನೇ ಸಾಲಿನ ಜಾತ್ರಾ ಮಹೋತ್ಸವವು(ರೊಟ್ಟಿ ಜಾತ್ರೆ) ಜ.18ರಿಂದ 20ರ ವರೆಗೆ ನಡೆಯಲಿದೆ.

ಮಠದ ಶಾಂತಲಿಂಗ ಸ್ವಾಮೀಜಿ ಸಾನ್ನಿಧ್ಯದಲ್ಲಿ ಜಾತ್ರಾ ಮಹೋತ್ಸವದ ವಿವಿಧ ಸಮಿತಿ ರಚಿಸಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಶಿವಾನಂದ ಯಲಬಳ್ಳಿ, ಉಪಾಧ್ಯಕ್ಷರಾಗಿ ಶ್ರೀಧರ ಶೀಪ್ರಿ, ಕಾರ್ಯದರ್ಶಿಯಾಗಿ ಬಸಪ್ಪ ಕುರಿಯವರ, ಸಹಕಾರ್ಯದರ್ಶಿಯಾಗಿ ಪರಶುರಾಮ ಮಡಿವಾಳರ, ದಾಸೋಹ ಸಮಿತಿ ಅಧ್ಯಕ್ಷರಾಗಿ ಗೂಡುಸಾಬ್ ಯಲಿಗಾರ, ಉತ್ಸವ ಸಮಿತಿ ಅಧ್ಯಕ್ಷರಾಗಿ ಕುಮಾರ ಮರಿಗುದ್ದಿ , ಕಾರ್ಯಕ್ರಮ ಸಮಿತಿ ಅಧ್ಯಕ್ಷರಾಗಿ ಶರಣಯ್ಯ ಹಿರೇಮಠ, ಸದಸ್ಯರಾಗಿ ಗಂಗಯ್ಯ ವಸ್ತ್ರದ, ಸಂಗಣ್ಣ ಕಿತ್ತಲಿ, ಹನಮಂತ ಕಾಡಪ್ಪನವರ, ಮಂಜು ಕವಡಿಮಟ್ಟಿ, ದ್ಯಾಮಣ್ಣ ಶಾಂತಗೇರಿ, ವೀರಯ್ಯ ದೂಡಮನಿ, ಬಸಯ್ಯ ಮಠದ, ಶಿವಲಿಂಗಪ್ಪ ಯಲಬಳ್ಳಿ, ಶರಣಪ್ಪ ಚಿಕ್ಕನರಗುಂದ, ಶ್ರೀಶೈಲಪ್ಪ ಗಟ್ಟಿ, ಗ್ಯಾನೇಶ ಪಾರಗೆ, ಶರಣಪ್ಪ ಮಡಿವಾಳರ, ಮುದಿವಿರಪ್ಪ ಕರಕಿಕಟ್ಟಿ, ಇತರರು ಆಯ್ಕೆಯಾಗಿದ್ದಾರೆ.

ಜಾತ್ರೆ ಅಂಗವಾಗಿ ಡಿ. 30ರಂದು ಸಂಜೆ 5 ಗಂಟೆಗೆ ರಥ ಹೊರಹಾಕುವುದು, 31ರಿಂದ ಮಠದಲ್ಲಿ ನಿತ್ಯ ಸಂಜೆ 7.30ರಿಂದ 9.30ರವರೆಗೆ ಪ್ರಭಾಕರ ಉಳ್ಳಾಗಡ್ಡಿ ಅವರಿಂದ ಶ್ರೀಮದಥಣಿ ಮಹಾತಪಸ್ವಿ ಮುರುಘೇಂದ್ರ ಶಿವಯೋಗಿಗಳ ಚರಿತಾಮೃತ ಪುರಾಣ ಪ್ರವಚನ ಏರ್ಪಡಿಸಲಾಗಿದೆ. ಸಂಗೀತ ಶ್ರೀ ಈರಣ್ಣ ಹೂಲಿ ಕಡಲಿಕೊಪ್ಪ, ತಬಲಾ ಗುರುಪಾದಪ್ಪ ಭಜಂತ್ರಿ ಕರಮಡಿ, ಮಲ್ಲಣ್ಣ ಚಿಕ್ಕನರಗುಂದ, ಬಸವರಾಜ ಕುಪ್ಪಸ್ತ, ಬಾಪುಗೌಡ್ರ ತಿಮ್ಮನಗೌಡ್ರ ಸಂಗೀತ ಸೇವೆ ಸಲ್ಲಿಸುವರು ಎಂದು ಮಠದ ಪ್ರಕಟಣೆಯಲ್ಲಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net