ಭಾಗವತ ಪ್ರವಚನ ಜ್ಞಾನ ಯಜ್ಞ ಸಂಪನ್ನ

HOMA
ಕೊಪ್ಪಳದಲ್ಲಿ ಬುಧವಾರ ಭಾಗವತ ಪ್ರವಚನ ಜ್ಞಾನ ಯಜ್ಞ ನಡೆಯಿತು.
Published on

ಕೊಪ್ಪಳ: ನಗರದ ರಾಘವೇಂದ್ರ ಸ್ವಾಮಿ ಮಠದಲ್ಲಿ 12 ದಿನಗಳ ಕಾಲ ಹಮ್ಮಿಕೊಂಡಿದ್ದ ಭಾಗವತ ಪ್ರವಚನ ಜ್ಞಾನ ಯಜ್ಞವು ಬುಧವಾರ ಸಂಪನ್ನಗೊಂಡಿತು. ಶ್ರೀ ಸುವಿದ್ಯೇಂದ್ರ ತೀರ್ಥರ ನೇತೃತ್ವದಲ್ಲಿ ಬ್ರಹತೀ ಸಹಸ್ರಯಾಗ ನೆರವೇರಿತು.

ನಮ್ಮೆಲ್ಲರ ಜೀವನದಲ್ಲಿ ಆಹಾರ, ಅನ್ನಕ್ಕೆ ಪ್ರಧಾನ ಪಾತ್ರವಿದೆ. ಹೋಮದ ಧೂಮ, ನೀರು, ಜ್ಯೋತಿ ಸೇರಿ ಮೋಡ-ಮಳೆ ಆಗುತ್ತದೆ. ಇದರಿಂದ ನಮಗೆ ಅನ್ನ ಲಭಿಸುತ್ತದೆ ಎಂದು ಕನಕದಾಸರೇ ನಮಗೆ ತಿಳಿಸಿರುವರು ಎಂದು ಶ್ರೀಗಳು ಅನುಗ್ರಹ ಸಂದೇಶ ನೀಡಿದರು. ಇದೇ ಸಂದರ್ಭದಲ್ಲಿ ಯಾಗದ ಮಹತ್ವ ಹಾಗೂ ಫಲಗಳ ಬಗ್ಗೆ ವಿವರಿಸಿದರು.

ಬ್ರಹತೀ ಸಹಸ್ರಯಾಗಕ್ಕಾಗಿ ಗರುಡ ಆಕೃತಿಯಲ್ಲಿ ಯಜ್ಞ ಕುಂಡವನ್ನು 108 ಕಲಶ, ವರ್ಣದ ರಂಗೋಲಿಯಿಂದ ಅಲಂಕರಿಸಲಾಗಿತ್ತು. ಋತ್ವಿಜರಾದ ಕೃಷ್ಣಾಚಾರ್, ಉದಯಾಚಾರ್, ಹೃಷಿಕೇಶಾಚಾರ್, ಶ್ರೀನಿವಾಸಾಚಾರ್ ಅಲ್ಲೂರ್, ನವೀನ್ ಆಚಾರ್ಯ, ರಘುಪ್ರೇಮ ಆಚಾರ್ಯ, ನಾರಾಯಣದಾಸ ಮೊದಲಾದವರು ಯಾಗದಲ್ಲಿ ಭಾಗವಹಿಸಿದ್ದರು. 12 ದಿನ ನಡೆದ ಕಾರ್ಯಕ್ರಮದಲ್ಲಿ ಹಲವು ಶ್ರೀಗಳು ಭಾಗವತ ಪ್ರವಚನ, ಹರಿಕಥಾಮೃತಸಾರ ಪ್ರವಚನ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net