

ವಿಜಯವಾಣಿ ಸುದ್ದಿಜಾಲ ಕಾಸರಗೋಡು
ಜನರಲ್ಲಿ ಧಾರ್ಮಿಕ ಪ್ರಜ್ಞೆ ಜಾಗೃತಿಯಾದಾಗ ದೇವಾಲಯಗಳೂ ಉನ್ನತಿಗೇರಲು ಸಾಧ್ಯ ಎಂದು ಎಡನೀರು ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ತಿಳಿಸಿದರು.
ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ಅಂಗವಾಗಿ ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಎಣ್ಮಕಜೆ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ತಂತ್ರಿ ನೀಲೇಶ್ವರ ಕೀಕಾಂಗೋಡು ಉಚ್ಚಿಲತ್ತಾಯ ಪದ್ಮನಾಭ ಅನುಗ್ರಹ ಭಾಷಣ ಮಾಡಿದರು. ದೇವಸ್ಥಾನದ ಪರಿಚಯ ಒಳಗೊಂಡ ಕತಿಯನ್ನು ಮಲಬಾರ್ ದೇವಸ್ವಂ ಬೋರ್ಡ್ ಆಯುಕ್ತ ಟಿ.ಸಿ ಬಿಜು ಬಿಡುಗಡೆಗೊಳಿಸಿದರು. ಸಹಾಯಕ ಆಯುಕ್ತ ಪ್ರದೀಪ್ ಕೆ.ಪಿ., ಎಣ್ಮಕಜೆ ಗ್ರಾಪಂ ಅಧ್ಯಕ್ಷ ಸೋಮಶೇಖರ ಜೆ.ಎಸ್., ಬ್ರಹ್ಮಕಲಶೋತ್ಸವ ಸಮಿತಿ ಪದಾಧಿಕಾರಿಗಳಾದ ಸದಾಶಿವ ಭಟ್ ಹರಿನಿಲಯ, ಸದಾನಂದ ಶೆಟ್ಟಿ ಕುದ್ವ, ಕೋಲಾಯ ಗುತ್ತು ಗೋಪಾಲ ಮಣಿಯಾಣಿ ಉಪಸ್ಥಿತರಿದ್ದರು. ದೇವಸ್ಥಾನ ಆಡಳಿತ ಮೊಕ್ತೇಸರ ಪಡ್ಡಂಬೈಲುಗುತ್ತಿ ತಾರಾನಾಥ ರೈ ಸ್ವಾಗತಿಸಿದರು. ಶಿವರಾಂ ಅರೆಕ್ಕಾಡಿ ನಿರೂಪಿಸಿದರು.
ಶ್ರೀ ಸುಬ್ರಹ್ಮಣ್ಯ ಪ್ರಕೃತಿಯಲ್ಲಿ ವಿಲೀನವಾಗಿರುವ ದೇವರಾಗಿದ್ದು, ಸತ್‌ಸಂಪತ್ತು ಪ್ರಾಪ್ತಿಗಾಗಿ ಶ್ರೀ ಸುಬ್ರಾಯ ದೇವರ ಆರಾಧನೆ ಅಗತ್ಯ. ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ https://www.vijayavani.net/nruthya-vaibhava-at-gokulam-goshala-in-periya https://www.vijayavani.net/ksrtc-bus-service-starts-between-puttur-and-katukukke